ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಕರ್ನಾಟಕದ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆದ ಹಣ ವರ್ಗಾವಣೆ ಮತ್ತು ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ಯಾವುದೇ ಪಾತ್ರ ಇಲ್ಲ. ಇದೇಲ್ಲ ಬಿಜೆಪಿಯವರ ಹುನ್ನಾರ
ಯಾವುದೇ ಕಾರಣಕ್ಕೂ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಅವರು ಹೇಳಿದರು.
ನಗರದ ನಕ್ಷತ್ರ ಹೊಟೇಲ್ ನಲ್ಲಿ ಬುಧವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಣದ ವರ್ಗಾವಣೆ ಬಗ್ಗೆ ಸಚಿವ ನಾಗೇಂದ್ರ ಅವರ ಗಮನಕ್ಕೆ ತರದೆ ಅಲ್ಲಿನ ಅಧಿಕಾರಗಳು ಹಣಕಾಸು ವ್ಯವಹಾರ ಮಾಡಿರುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ಮತ್ತು ನೀತಿ ಸಂಹಿತೆ ಇರುವುದರಿಂದ ಯಾವುದೇ ಸಭೆ ಅಥವಾ ಪರಿಶೀಲನೆ ಮಾಡುವ ಅಧಿಕಾರಿಗೆ ಇರುತ್ತದೆ. ಆದರೆ ಈ ಅವಕಾಶ ಸಚಿವರಿಗೆ ಇರುವುದಿಲ್ಲ. ಹೀಗಿದ್ದ ಮೇಲೆ ಸಚಿವ ನಾಗೇಂದ್ರ ಅವರ ಹೇಗೆ ತಪಿತಸ್ಥರಾಗುತ್ತಾರೆ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹೇಳುತ್ತಾರೆ ಚಂದ್ರಶೇಖರ ಸಾವಿಗೆ ನಾಗೇಂದ್ರ ಕಾರಣ ಎಂದು. ಆದರೆ ಚಂದ್ರಶೇಖರ ಬರೆದ ಡೇತ್ ನೋಟ್ ನಲ್ಲಿ ಅವರ ಹೆಸರು ಇಲ್ಲ. ಹಾಗಿದ್ದಾಗ ನಾವು ಅವರ ಮೇಲೆ ಆರೋಪ ಮಾಡಲು ಬರುವುದಿಲ್ಲ. ಈ ಪ್ರಕರಣ ಸಿಐಡಿಗೆ ಓಪ್ಪಿಸಲಾಗಿದೆ. ಅವರು ತನಿಖೆ ಮಾಡಿದ ನಂತರ ಸತ್ಯ ಹೊರ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮಹಾನಗರ ಪಾಲಿಕೆಯ ಮೇಯರ್ ಎಸ್. ಶ್ವೇತಾ, ಉಪಮಹಾ ಪೌರರಾದ ಜಾನಕಿ, ಹುಮಾಯೂನ್ ಖಾನ್, ಮಾನಯ್ಯ, ರಾಜೇಶ್ವರಿ ಸುಬ್ಬರಾಯಡು, ಪಾಲಿಕೆ ಸದಸ್ಯರಾದ ಆಸೀಫ್, ನೂರ್ ಮಹಮ್ಮದ್, ಕುಬೇರ, ಬಿ. ಎಲ್ ಆರ್ ಸೀನಾ, ವೆಂಕಟೇಶ್ ಹೆಗಡೆ ಸೇರಿದಂತೆ ಇತರರು ಹಾಜರಿದ್ದರು.