ಬೆಳಗಾಯಿತು ವಾರ್ತೆ
ಬಳ್ಳಾರಿ: ಸರ್ಕಾರಿ ಪದವಿ ಪೂರ್ವ ಕಾಲೇಜ್ ಅತಿಥಿ ಉಪನ್ಯಾಸಕರ ವೆವೆಧ ಬೇಡಿಕೆ ಹಾಗೂ ಸಮಸ್ಯೆ ಗಳನ್ಜು ಸರ್ಕಾರದ ಗಮನಕ್ಕೆ ತರಲು ಇದೇ ತಿಂಗಳು ಡಿ.೨೨ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಅತಿಥಿ ಉಪನ್ಯಾಸಕರ ಸಂಘಟನೆಯಿಂದ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಜಂಟಿ ಕಾರ್ಯದರ್ಶಿ ನಾಗರತ್ನ ಎಸ್. ಜಿ ಅವರು ಹೇಳಿದರು.
ನಗರದ ಖಾಸಗಿ ಮರ್ಚೆಡ್ ಹೋಟೆಲ್ ನಲ್ಲಿ ಶನಿವಾರ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಮಕ್ಕಳ ಭವಿಷ್ಯ ರುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಕಾಲೇಜಿನ ಪ್ರತಿಯೊಂದು ಕೆಲಸವನ್ನು ಅತಿಥಿ ಉಪನ್ಯಾಸಕರು ಮಾಡುತ್ತಾರೆ. ಕಾಲೇಜಿನ ದಾಖಲಾತಿ ಸಮಯದಲ್ಲಿ ಅವರು ತಮ್ಮನ್ನ ತೊಡಗಿಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಈ ರೀತಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಡುವ ಅತಿಥಿ ಉಪನ್ಯಾಸಕ ಸಮಸ್ಯೆಗಳನ್ನು ಯಾರು ಕೇಳುವವರಿಲ್ಲದಂತೆ ಆಗಿದೆ ಎಂದುರು.
ಸಮಾಜದಲ್ಲಿ ಇತರೆ ಕೆಲಸ ಮಾಡುವವರ ಸಂಬಳ ೧೫ ಸಾವಿರಕ್ಕೂ ಹೆಚ್ಚಿರುತ್ತದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಉಪನ್ಯಾಸಕರ ಗೌರವ ಧನ ೧೨ ಸಾವಿರ ಇದೆ. ಇದರಿಂದ ಅವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು, ಸರ್ಕಾರ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ರಂಗಣ್ಣ ಹಾಜರಿದ್ದರು.
ಬೇಡಿಕೆಗಳು
- ಅತಿಥಿ ಉಪನ್ಯಾಸಕರ ಗೌರವ ಧನ ೨೫ ಸಾವಿರಕ್ಕೆ ಏರಿಸಬೇಕ.
- ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆಯಲ್ಲಿ ಮೆರಿಟ್ ನೊಂದಿಗೆ ಸೇವಾ ಅನುಭವವನ್ನು ಪರಿಗಣಿಸಬೇಕು.
- ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು.