31.7 C
Bellary
Friday, April 5, 2024

Localpin

spot_img

ರಾಹುಲ್ ಗಾಂಧಿ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ: ಬಳ್ಳಾರಿ ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜೀನ್ಸ್ ಉದ್ಯಮ. ಆ ಉದ್ಯಮಕ್ಕೆ ಉತ್ತೇಜನ ನೀಡಬೇಕು ಅಂತ ಜನರು ಹಲವು ವರ್ಷಗಳಿಂದ ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಆದರೆ ಕೇವಲ ಭರವಸೆಗಳ ಮೇಲೆ ಭರವಸೆಗಳು ಅಭಿವೃದ್ಧಿ ಹೊಂದುತ್ತಿವೆಯೇ ಹೊರತು ವಾಸ್ತವದಲ್ಲಿ ಯಾವುದೂ ಪ್ರಗತಿಯಾಗಿಲ್ಲ ಎನ್ನುವುದು ಬಳ್ಳಾರಿ ಜನರ ವಾದವಾಗಿದೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬಳ್ಳಾರಿಯಲ್ಲಿ 5,000 ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಅಫೆರಲ್ ಪಾರ್ಕ್​​ ಮಾಡುತ್ತೇವೆ, ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು.. ಇದು ಕಾಂಗ್ರೆಸ್‌ನ ಗ್ಯಾರಂಟಿ ಅಂತಲೂ ಘಂಟಾಘೋಷವಾಗಿ ಹೇಳಿದ್ರು. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುತ್ತೇವೆ ಅಂದವರು ಮೊದಲ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನ ಕೈ ಬಿಟ್ರು.ನಂತರ ಇದನ್ನ ಗಮನಿಸಿದ ಸ್ವತಃ ರಾಹುಲ್ ಗಾಂಧಿ ಸರ್ಕಾರಕ್ಕೆ ಪತ್ರ ಬರೆದು ಬಳ್ಳಾರಿಯಲ್ಲಿ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ರು. ರಾಹುಲ್ ಗಾಂಧಿ ಪತ್ರ ಬರೆದ ಬಳಿಕ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು ಮೊನ್ನೆಯ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರಲ್ ಪಾರ್ಕ ನಿರ್ಮಾಣ ಮಾಡುತ್ತೇವೆ ಅಂತಾ ಪ್ರಸ್ತಾಪ ಮಾಡಿದ್ರು ಆದರೆ, ಇಂತಿಷ್ಟು ಹಣ ನೀಡಲಾಗುತ್ತೆ ಅಂತಾ ಬಜೆಟ್‌ನಲ್ಲಿ ಹೇಳಿಲ್ಲ, ಅಪರಲ್ ಪಾರ್ಕ್​​ ‌ಗೆ ಜಾಗ ಗುರುತು ಮಾಡಿಲ್ಲ. ಕೇವಲ ಪ್ರಸ್ತಾಪ ಮಾಡಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles