ಬೆಳಗಾಯಿತು ವಾರ್ತೆ |www.belagayithu.in
ಬೀಜಿಂಗ್: ದಕ್ಷಿಣ ಚೀನಾದ ಗುವಾಂಗ್‍ಝಾವ್ ನಗರದಲ್ಲಿ ನದಿಯ ಸೇತುವೆಗೆ ಸರಕು ನೌಕೆಯೊಂದು ಢಿಕ್ಕಿಯಾದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಆಗ ಸೇತುವೆಯಲ್ಲಿ ಸಾಗುತ್ತಿದ್ದ ಬಸ್ಸು ಸಹಿತ 5 ವಾಹನಗಳು ನದಿಗೆ ಉರುಳಿ ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇತರ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.