ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ನಲ್ಲಿ ತಿಳಿಸಿದ್ದಾರೆ.
ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು. ಕೇಂದ್ರ ಸರ್ಕಾರದ ನೀತಿಯ ಪ್ರಕಾರ ಕಮರ್ಷಿಯಲ್ ವಾಹನಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. ಆಯಸ್ಸು ಮೀರಿದ 1.38 ಕೋಟಿ ವಾಹನಗಳನ್ನ ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ತಮಿಳುನಾಡಿನಲ್ಲಿ ಕೆಲವೊಂದು ವಾಹನಗಳಿಗೆ ವಿನಾಯ್ತಿಕೇಳಿದ್ದಾರೆ. ಅದೇ ರೀತಿ ಅಗ್ನಿಶಾಮಕ ಇಲಾಖೆಯಲ್ಲಿ ಕಡಿಮೆ ಬಳಕೆಯಾದ ವಾಹನಗಳಿವೆ. ಅಂತಹ ವಾಹನಗಳಿಗೆ ವಿನಾಯಿತಿ ಕೋರಿ ನಾವು ಕೂಡ ಪತ್ರ ಬರೆದಿದ್ದೇವೆ. 15 ವರ್ಷ ಮೀರಿದ ಬಸ್ ಗಳು ನಿಗಮದಲ್ಲಿ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.





