ಬೆಳಗಾಯಿತು ವಾರ್ತೆ |www.bealagayithu.in
ಬೆಂಗಳೂರು: ಶರಣ ವಕೀಲರ ವೇದಿಕೆ- ಕರ್ನಾಟಕ, ಬೆಂಗಳೂರು, ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಯುವ ವಕೀಲರಾದ ಅನವಾಳ ಶರಣಬಸಪ್ಪ ಅವರನ್ನು, ಶರಣ ವಕೀಲರ ವೇದಿಕೆ-ಕರ್ನಾಟಕ, ಬೆಂಗಳೂರು, ಯುವ ಘಟಕದ ರಾಜ್ಯಧ್ಯಕ್ಷರಾದ ಆತ್ಮ ವಿ.ಹಿರೇಮಠ್,ಆದೇಶದ ಮೇರೆಗೆ ನೇಮಕ ಮಾಡಲಾಗಿದೆ.
ಯುವ ಘಟಕದ ಸಂಘಟನೆಯನ್ನು ಕರ್ನಾಟಕ ರಾಜ್ಯದ್ಯಾಂತ ಪ್ರವಾಸಮಾಡಿ. ಶರಣ ವಕೀಲರ ವೇದಿಕೆ-ಕರ್ನಾಟಕ, ಯುವ ಘಟಕ ಸಂಘಟನೆ ಮಾಡಲು ಕೋರಲಾಗಿದೆ. ತಾವು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮದ ವಿಚಾರವನ್ನು ಮತ್ತು ವಿವರಗಳನ್ನು ಶರಣ ವಕೀಲರ ವೇದಿಕೆ- ಕರ್ನಾಟಕ, ಬೆಂಗಳೂರು ಯುವ ಘಟಕ, ಬೆಂಗಳೂರುರವರ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರಲು ಕೋರಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸಿ. ಚನಾಸೂರ ಅವರು ತಿಳಿಸಿದ್ದಾರೆ.





