30.1 C
Bellary
Thursday, April 18, 2024

Localpin

spot_img

ಬಳ್ಳಾರಿಯಲ್ಲಿ ನೂತನವಾಗಿ ಖಾಸಗಿ ಕಿಷ್ಕಿಂದ ವಿಶ್ವವಿದ್ಯಾಲಯ ಪ್ರಾರಂಭ

ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದಲ್ಲಿ ಮೊದಲ ಬಾರಿಗೆ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಹೊಸದಾಗಿ ಕಿಷ್ಕಿಂದ ವಿಶ್ವವಿದ್ಯಾಲಯವನ್ನು ಪ್ರಾರಂಭಮಾಡಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಡಾ. ಎಸ್ ಜೆ ವಿ ಮಹಿಪಾಲ್ ಅವರು ಹೇಳಿದರು.

ನಗರದ ಬಿಬಿಸಿ ಕಾಲೇಜ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಿಷ್ಕಿಂದ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಕಾಯ್ದೆ 2023 ಕರ್ನಾಟಕ ಅಧಿನಿಯಮ ಸಂಖ್ಯೆ 20/2023 ಸ್ಥಾಪಿತವಾಗಿ ಈ ವರ್ಷದಿಂದ ಬಳ್ಳಾರಿಯಲ್ಲಿ ಪ್ರಾರಂಭ ಮಾಡಲಾಗಿದೆ.
ಈ ಸಂಸ್ಥೆ ಬಳ್ಳಾರಿ, ಸಿರಗುಪ್ಪ ರಸ್ತೆಯ ಸಿಂಧಗೇರಿ ಗ್ರಾಮದ ಹತ್ತಿರ ಟ್ರಸ್ಟಿನ ಸ್ವಂತ 50 ಎಕರೆಯಲ್ಲಿ ಶಾಶ್ವತ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಯಾಗಲಿದೆ ಎಂದ ಅವರು, ಈ ವಿಶ್ವವಿದ್ಯಾಲಯವನ್ನು ಎರಡು ವರ್ಷದ ಕಾಲ ತಾತ್ಕಾಲಿಕವಾಗಿ ಬಿಐಟಿಎಂ ಮತ್ತು ಬಿಬಿಸಿಯಲ್ಲಿ ನಡೆಸಲು ಸರ್ಕಾರದ ಅನುಮತಿ ದೊರೆತಿದ್ದು, ಇಂಜಿನಿಯರಿಂಗ್ ಕೋರ್ಸುಗಳನ್ನು ಕರ್ನಾಟಕ-ಸಿಇಟಿ ಮುಖಾಂತರ ಭರ್ತಿ ಮಾಡಲು ಸಿಇಟಿ ಕೌನ್ಸಿಲಿಂಗ್ ಕೋಡ್ ಇ-301 ನೀಡಲಾಗಿದೆ. ಇದನ್ನು ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮೂಲಕ ಉಪಯೋಗಿಸಿಕೊಳ್ಳಬಹುದು. ಇದೇ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಯ ಪ್ರವೇಶಗಳಿಗಾಗಿಯೂ ನೊಂದಯಿಸಲು ಅವಕಾಶ ಇರುತ್ತದೆ ಎಂದರು.

ಈ ವಿಶ್ವವಿದ್ಯಾಲಯದಲ್ಲಿ ಈ ವರ್ಷದಿಂದ ಇಂಜಿನಿಯರಿಂಗ್ & ಟೆಕ್ನಾಲಜಿ ಸ್ಟೀಮ್ ನಿಂದ 4 ವರ್ಷದ ಪದವಿ ಕೋರ್ಸುಗಳಾದ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಬಿ.ಟೆಕ್‌-ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್‌ ಇಂಜಿನಿಯರಿಂಗ್, ಬಿ.ಟೆಕ್-ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹಾಗೂ 3 ವರ್ಷದ ಪದವಿ ಬಿ.ಸಿ.ಎ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಎ, ಕೋರ್ಸುಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಯಶವಂತ್ ಭೂಪಾಲ್, ಪೃಥ್ವಿರಾಜ್ , ವಿ.ಜಿ ಭರತ್, ಅಮರಾಜ್ ಭೂಪಾಲ್ ಹಾಜರಿದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles