ಬಳ್ಳಾರಿಯಲ್ಲಿ ನಕಲಿ ಚಿನ್ನದ ನಾಣ್ಯಗಳಿಂದ 7 ಲಕ್ಷ ರೂ. ವಂಚನೆ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 7 ಲಕ್ಷ ರೂ. ವಂಚಿಸಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ರಮೇಶ್ (42) ಎಂಬಾತನ ಮೇಲೆ ಆರೋಪ ಕೇಳಿಬಂದಿದೆ.
ತೆಲಂಗಾಣ ರಾಜ್ಯದ ಮಂಚಿರಾಲು ಜಿಲ್ಲೆಯ ಶ್ರೀಕಾಂತ್ ಎಂಬವರು ವಂಚನೆಗೊಳಗಾದವರು. ಆರೋಪಿ ರಮೇಶ್, “ನಮ್ಮ ಅಜ್ಜನ ಹಳೆಯ ಮನೆಯನ್ನು ಕೆಡವಿ ಬುನಾದಿ ಅಗೆಯುವಾಗ 5 ಕೆ.ಜಿ. ತೂಕದ ಚಿನ್ನದ ನಾಣ್ಯಗಳಿರುವ ಬಿಂದಿಗೆ ಸಿಕ್ಕಿದೆ. ನಮಗೆ ತುರ್ತು ಹಣದ ಅಗತ್ಯವಿದೆ, ನಿಮಗೆ ಕಡಿಮೆ ದರಕ್ಕೆ ಕೊಡುತ್ತೇವೆ,” ಎಂದು ಹೇಳಿ ಶ್ರೀಕಾಂತ್ ಅವರನ್ನು ಸಂಪರ್ಕಿಸಿದ್ದನು.
ಸೆಪ್ಟೆಂಬರ್ 29ರಂದು ಬಳ್ಳಾರಿಯ ಹೊಸಪೇಟೆ ರಸ್ತೆಯಲ್ಲಿರುವ ಖಾಸಗಿ ಶಾಲೆ ಸಮೀಪಕ್ಕೆ ಶ್ರೀಕಾಂತ್ ಅವರನ್ನು ಕರೆಸಿಕೊಂಡಿದ್ದನು. ಮೊದಲಿಗೆ ಎರಡು ಸಣ್ಣ ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಅವರ ನಂಬಿಕೆ ಗಳಿಸಿದ್ದನು.
ನಂತರ ಅಕ್ಟೋಬರ್ 4ರಂದು ಮತ್ತೆ ಅದೇ ಸ್ಥಳಕ್ಕೆ ಕರೆಸಿ, 7 ಲಕ್ಷ ರೂ. ನಗದು ಪಡೆದು ಅರ್ಧ ಕೆ.ಜಿ. ನಾಣ್ಯಗಳಿದ್ದ ಬ್ಯಾಗ್ ನೀಡಿ ಪರಾರಿಯಾಗಿದ್ದನು. ಬಳಿಕ ನಾಣ್ಯಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಬಹಿರಂಗವಾಗಿದೆ.
ಈ ಕುರಿತು ಶ್ರೀಕಾಂತ್ ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಶೋಧ ಕಾರ್ಯ ಮುಂದುವರೆಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles