ಬೆಳಗಾಯಿತು ವಾರ್ತೆ
ಬಳ್ಳಾರಿ: ಸದಾಶಿವ ಆಯೋಗ ವರದಿ ಜಾರಿಗೆ ಕೇಲವರು ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದು, ಸರ್ಕಾರ ಇವರ ಒತ್ತಡಕ್ಕೆ ಮಣಿದು ಈ ಆಯೋಗವನ್ನು ಸರ್ಕಾರ ಜಾರಿ ಮಾಡಬಾರದು ಎಂದು ಗೋರ ಸೇನಾ ರಾಜ್ಯ ಸದಸ್ಯ ಗೋಪಿನಾಯ್ಕ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂದಿನ ಸರ್ಕಾರ ಸದಾಶಿವ ವರದಿ ಜಾರಿ ಕುರಿತು ಕ್ರಮ ಕೈಗೊಂಡಾಗ ಅವರನ್ನ ತಕ್ಕ ಪಾಠ ಕಲಿಸಲಾಗಿದೆ. ಚುನಾವಣೆಯಲ್ಲಿ ಅವರನ್ನು ಮನೆಗೆ ಕಳಿಸಲಾಗಿದೆ. ಈ ಆಯೋಗ ಜಾರಿ ಮಾಡಿದರೆ ಸುಮಾರು ೧೦೧ ಜಾತಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಇಂದಿನ ಸರ್ಕಾರ ಸದಾಶಿವ ಆಯೋಗದ ಬಗ್ಗೆ ಯಾರ ಮಾತಿಗೂ ಮಣಿಯದೆ ಈ ಆಯೋಗದ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.
ಈ ಆಯೋಗದ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪನವರು ಮಂತ್ರಿಯಾಗಿ ಪ್ರಮಾಣವಚನ ಭೋದನಾ ಮತ್ತು ಗೌಪ್ಯತೆಯನ್ನು ಗಾಳಿಗೆ ತೂರಿ ತಮ್ಮ ಸಮುದಾಯದವನ್ನು ಸರ್ಕಾರದ ವಿರುದ್ಧ ಬಹಿರಂಗವಾಗಿ ಎತ್ತಿ ಕಟ್ಟುತ್ತಿದ್ದಾರೆ ನ್ಯಾಯಮೂರ್ತಿ ಸದಾಶಿವ ಆಯೋಗದ ಹಿನ್ನೆಲೆ ಮುನ್ನೆಲೆ ತಿಳಿ ರಾಜಕೀಯ ಕಾರಣಗಳಿಗಾಗಿ ಮುಗ್ಧ ಜನರನ್ನು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಪ್ರಚೋದನೆ ಮಾಡಿ ಕರ್ನಾಟಕದಲ್ಲಿ ದಲಿತರ ಐಕ್ಯತೆಗೆ ಭಂಗ ತಂದಿದ್ದಾರೆ ಆದುದರಿಂದ ಇವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋರ ಸೇನಾ ಬಳ್ಳಾರಿ ಜಿಲ್ಲಾಧ್ಯಕ್ಷ ಚಂದ್ರು ನಾಯ್ಕ್ ,ಜಿಲ್ಲಾ ಉಪಾಧ್ಯಕ್ಷ ನಾಯ್ಕ್ ಸ್ವಾಮಿ ನಾಯ್ಕ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯ್ಕ್, ಖಜಾಂಚಿ ಚರಣ್ ರಾಜ್ ನಾಯ್ಕ್ ಮಾದ್ಯಮ ವಕ್ತಾರ ಶೇಖರ್ ನಾಯ್ಕ್, ಶಿವಾನಾಯ್ಕ್, ಸಂತೋಷ ನಾಯ್ಕ, ಸತೀಶ್ ನಾಯ್ಕ್ ಸೇರಿದಂತೆ ಇತರರು ಹಾಜರಿದ್ದರು.
ಬೇಡಿಕೆಗಳು
1) ನ್ಯಾಯಮೂರ್ತಿ ಸದಾಶಿವ ಅಯೋಗದ ವರದಿಗೆ ಮರು ಜೀವ ಕೊಡಬಾರದು.
2) ಹಿಂದುಳಿದ ವರ್ಗದ ಕಾಂತರಾಜ ಆಯೋಗದ ವರದಿಯ ಬಿಡುಗಡೆ ಮಾಡಬೇಕು.
3) ಸರ್ಕಾರದ ಆಹಾರ ಮಂತ್ರಿ ಶ್ರೀಮುನಿಯಪ್ಪ ಇವರನ್ನು ವಜಾಗೊಳಿಸಬೇಕು.