ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಶ್ರೀ ರಾಮನವಮಿ ಪ್ರಯುಕ್ತ ಶುಕ್ರವಾರ ಬಳ್ಳಾರಿ ನಗರದ ಮೋತ್ತಿ ವೃತ್ತದಲ್ಲಿರುವ ಶ್ರೀರಾಮನ ದೇವಸ್ಥಾನಕ್ಕೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ದಿವ್ಯ ಕೃಪೆಯಿಂದ ಸಕಲ ಜನತೆಗೆ ಶಾಂತಿ, ಸೌಖ್ಯ ಹಾಗೂ ಸಮೃದ್ಧಿ ದೊರಕಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.
ಶ್ರೀ ರಾಮನವಮಿ ಹಿನ್ನೆಲೆಯಲ್ಲಿ ನಗರದಲ್ಲಿ ಭಕ್ತಿ ಮಯ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನ ಪಡೆದರು.
ನಗರದ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿದವು.
ಈ ವೇಳೆ ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಸೇರಿದಂತೆ ಎಲ್. ಮಾರೆಣ್ಣ, ಪಾಲಿಕೆ ಸದಸ್ಯರಾದ ಮಿಂಚು ಸೀನಾ, ಮಾಜಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯುಡು, ಕವಿತಾ ಹೊನ್ನಪ್ಪ, ವಿಷ್ಣು ಬೋಯಪಾಟಿ, ಭಾಸ್ಕರ್, ವೆಂಕಟಸ್ವಾಮಿ, ಸಾಯಿಬಾಬಾ, ಗುರುವಯ್ಯ, ಚಾನಾಳ್ ಶೇಖರ್, ಸೂರಜ್, ಸುನೀಲ್, ಹೊನ್ನಪ್ಪ, ಹಗರಿ ಗೋವಿಂದ, ಪರಶುರಾಮುಡು, ಬಾಲರಾಜು, ಚರಣ್, ಅಭಿ, ಶಿವರಾಜ್, ಭರತ್, ಬುಜ್ಜಿ, ಕಪ್ಪೆ ಶಿವು, ಸೂಪರ್ ಮಾರ್ಕೆಟ್ ರಘು, ಪ್ರದೀಪ್, ಕುಡಿತಿನಿ ರಾಮಾಂಜನೇಯ, ಪೆದ್ದನ್ನ, ಶ್ರೀನಿವಾಸ ಸೇರಿದಂತೆ ಹಲವರು ಹಾಜರಿದ್ದರು.





