ಬೆಳಗಾಯಿತು ವಾರ್ತೆ
ಬಳ್ಳಾರಿ: ಚಿಕ್ಕಮಗಳೂರುನಲ್ಲಿ ನ.೩೦ರಂದು ವಕೀಲ ಪ್ರೀತಮ್ ಅವರ ಮೇಲೆ ಪೊಲೀಸರಿಂದ ಆದ ದೌರ್ಜನ್ಯ ಖಂಡಿಸಿ ಬಳ್ಳಾರಿ ವಕೀಲರ ಸಂಘದಿಂದ ಶುಕ್ರವಾರ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಕೆ. ಏರಿಗೌಡ ಅವರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ವಕೀಲರು ಪಾತ್ರ ವಹಿಸುತ್ತಾರೆ. ಇಂತಹ ವಕೀಲರ ಮೇಲೆ ದಿಂದ ದಿನಕ್ಕೆ ಪೊಲೀಸ್ ರಿಂದ ದೌರ್ಜನ್ಯ ಹೆಚ್ಚಾಗಿತ್ತಿದೆ. ಸಮಾಜದಲ್ಲಿ ಭದ್ರತೆ ಒದಗಿಸಬೇಕಾದ ಪೊಲೀಸ್ ರೇ ಈ ರೀತಿ ವರ್ತನೆ ಮಾಡಿದರೆ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹೇಗೆ ಕಾಪಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ನ.೩೦ರಂದು ಚಿಕ್ಕಮಗಳೂರನಲ್ಲಿ ವಕೀಲ ಪ್ರೀತಮ್ ಅವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಜತೆಗೆ ಅವರ ಮೇಲೆ ನಾಲ್ಕು ಸುಳ್ಳು ಕೇಸ್ ಹಾಕಲಾಗಿದೆ. ಡಿ.೭ ರಂದು ಕಲಬುರ್ಗಿಯಲ್ಲಿ ವಕೀಲರಾದ ಈರಣ್ಣಗೌಡ ಪಾಟೀಲ್ ಇವರ ಭೀಕರ ಕೋಲೆ ಆಗಿದೆ. ಈ ರೀತಿ ವಕೀಲರ ಮೇಲೆ ಆಗಾಗ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಈ ರೀತಿಯಾದರೆ ವಕೀಲರಿಗೆ ಎಲ್ಲಿ ನ್ಯಾಯ ಸಿಗುತ್ತದೆ ಎಂದರು.
ಇಂತಹ ಅಮಾನುಷವಾಗಿ ವರ್ತನೆ ಮಾಡುವ ಪೊಲೀಸ್ ರನ್ನು ಸರ್ಕಾರ ತಕ್ಷಣ ಕರ್ತವ್ಯ ದಿಂದ ಕಿತ್ತು ಹಾಕಬೇಕು. ಜತೆಗೆ ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ರಚಿಸಿ ವಕೀಲರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ವಕೀಲರ ಸಂಘದ ಉಪಾಧ್ಯಕ್ಷರಾದ ಎಂ. ನಾಗರಾಜ ನಾಯಕ, ಕಾರ್ಯದರ್ಶಿ ಬಿ. ರವೀಂದ್ರ ನಾಥ್, ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ, ಖಜಾಂಚಿ ಕೆ.ಎನ್ ಈರೇಶ್ ಸೇರಿದಂತೆ ನೂರಾರು ವಕೀಲರು ಹಾಜರಿದ್ದರು.