25.5 C
Bellary
Friday, March 14, 2025

Localpin

spot_img

ಪೊಲೀಸ್ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿ

ಬೆಳಗಾಯಿತು ವಾರ್ತೆ | Www.belagayithu.in

ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಏರ್ಪಟ್ಟ 12 ಓವರ್​ಗಳ ಸೌಹಾರ್ದಯುತ ಕ್ರಿಕೆಟ್ ಪಂದ್ಯದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ತಂಡವು ಪತ್ರಕರ್ತರ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡೆ.
ಕೊಪ್ಪಳ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪೊಲೀಸರ ವಾರ್ಷಿಕ ಕ್ರೀಡಾಕೂಟದ 2024-25ರ ಅಂಗವಾಗಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ ಎಲ್ ಅರಸಿದ್ದಿ ಅವರು ಬ್ಯಾಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ತಂಡ ಹಾಗೂ ಸಿರಾಜ್ ಬಿಸರಳ್ಳಿ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಂಡಕ್ಕೇ ಎಸ್ಪಿಯವರು ಶುಭ ಕೋರಿದರು. ಕಾರ್ಯನಿರತ ಪತ್ರಕರ್ತರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಬ್ರಹ್ಮಾನಂದ ಬಡಿಗೇರ್ ಹಾಗೂ ಧರ್ಮಣ್ಣ ಹಟ್ಟಿ ಅವರ ಮೂರು ಓವರ್ ಗಳಲ್ಲಿ ಉತ್ತಮ ರನ್ನುಗಳನ್ನು ಕಲೆ ಹಾಕಿದರು. ತಂಡಕ್ಕೆ ಆಸರೆಯಾಗಿ ಧರ್ಮಣ್ಣ ಹಟ್ಟಿ 36 ರನ್‍ಗಳನ್ನು ಬಾರಿಸಿದ್ದರಿಂದ ತಂಡ ಉತ್ತಮ ಆರಂಭ ಕಂಡು 12 ಓವರ್ ಗಳಲ್ಲಿ 72 ರನ್ ದಾಖಲಿಸಿತು. ಅಶ್ಪಾಕ್ ಅಹಮದ್, ದೇವೇಂದ್ರ ಬಳಿಗೇರ್, ಆಂಜನೇಯ, ಸಿದ್ದು ಹಿರೇಮಠ, ಸಿರಾಜ್ ಬಿಸರಳ್ಳಿ, ರವಿಚಂದ್ರ ಬಡಿಗೇರ್, ಬ್ಯಾಟಿಂಗ್ ನಲ್ಲಿ ಉತ್ತಮವಾಗಿ ಆಡಿದರು.
ನಂತರ ನಿಗದಿತ 12 ಓವರ್ ಗಳಲ್ಲಿ 72 ರನ್ನು ಗುರಿ ಬೆನ್ನತ್ತಿದ ಪೊಲೀಸ್ ತಂಡದ ಓಪನಿಂಗ್ ಬ್ಯಾಟ್ಮ್ಯಾನ್ ಆಗಿ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ರವರು ಹಾಗೂ ಕೊಪ್ಪಳ ಮಹಿಳಾ ಠಾಣೆಯ ಪಿಐ ಆಂಜನೇಯ ರವರು ಉತ್ತಮ ಆಟ ಆಡುವ ಮೂಲಕ 50 ರನ್ ತಂಡಕ್ಕೆ ಕೊಡುಗೆಯಾಗಿ ನೀಡಿದರು. ಅತಿಕ್ ಅಹಮದ್ ಅವರ ಬೌಲಿಂಗ್ ನಲ್ಲಿ ಸಿದ್ದನಗೌಡ್ರು ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಮಲ್ಲನಗೌಡ್ರು ಹಾಗೂ ಆಂಜನೇಯ ರವರು ಉತ್ತಮ ಆಟ ಆಡುವಾಗ ಮಲ್ಲನಗೌಡ್ರು ರವರು ಆಂಜನೇಯ ಅವರ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ತಂಡಕ್ಕೆ ಆಸರೆಯಾಗಿ ಗೆಲುವಿಗೆ ರೂವಾರಿಯಾದವರು ಡಿ.ಆರ್.ಡಿ ವೈಎಸ್ಪಿ ನಿಂಗಪ್ಪ ರವರು ಉತ್ತಮ ಆಟ ಆಡುವ ಮೂಲಕ 9 ಓವರ್ ಗಳಲ್ಲಿ 76 ರನ್ ಕಲೆ ಹಾಕುವ ಮೂಲಕ ಪೊಲೀಸ್ ತಂಡ ಗೆಲುವಿನ ನಗೆ ಬೀರಿತು. ವಿಶೇಷವಾಗಿ ಪೊಲೀಸ್ ಇಲಾಖೆ ತಂಡದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್ ಅರಸಿದ್ದಿ ರವರು ಕೀಪಿಂಗ್ ಮಾಡುವ ಮೂಲಕ ಗಮನ ಸೆಳೆದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles