ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಇತ್ತೀಚೆಗೆ ಮಾಜಿ ಮೇಯರ್‌ನ ಮಗನಿಂದ ಹಲ್ಲೆಗೊಳಲಾದ ಯುವಕ ತಿಪ್ಪೇಸ್ವಾಮಿ ಮೃತಪಟ್ಟ ಪ್ರಕರಣಕ್ಕೆ ಸಂಬAಧಪಟ್ಟ 12 ಆರೋಪಿಗಳ ಪೈಕಿ 10 ಆರೋಪಿಗಳನ್ನು ಬಂಸಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶುಕ್ರವಾರ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 832 ರೌಡಿ ಶೀಟರ್‌ಗಳಿದ್ದಾರೆ. ಅದರಲ್ಲಿ 4 ರೌಡಿ ಶೀಟರ್ ವಿರುದ್ಧ ಗಡಿಪಾರು ಶಿಫಾರಸ್ಸು ಮಾಡಲಾಗಿತ್ತು.
ಒಬ್ಬ ರೌಡಿ ಶೀಟರ್ ಮಾತ್ರ ಬೀದರ್‌ಗೆ ಗಡಿಪಾರು ಮಾಡಲಾಗಿದೆ. ಲೋಕಸಭ ಚುನಾವಣೆಗೆ 6 ಡಿಎಸ್ಪಿ, 16 ಪಿಐ, 31 ಪಿಎಸ್‌ಐ , 108 ಎಎಸ್‌ಐ, 1175 ಎಚ್‌ಸಿ ಮತ್ತು ಪಿಸಿ ಮತ್ತು 731 ಎಚ್‌ಜಿ ಸೇರಿ ಒಟ್ಟು 2067 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 24 ಚೆಕ್‌ಪೋಸ್ಟ್ ತೆರೆಯಾಲಾಗಿದ್ದು, ಅದರಲ್ಲಿ 13 ಅಂತರ್ ರಾಜ್ಯ ಚೆಕ್‌ಪೋಸ್ಟ್ಗಳಿವೆ ಎಂದು ತಿಳಿಸಿದರು.
7.37 ಲಕ್ಷ ಮೌಲ್ಯದ 26.33 ಕೆಜಿ ಬೆಳ್ಳಿ, 3.55 ಲಕ್ಷ ನಗದು, 2.58 ಲಕ್ಷ ಮೌಲ್ಯದ 300 ಕೂಕ್ಕರ್, 150 ಸ್ಟೌವ್, 66 ಸೀಲಿಂಗ್ ಫ್ಯಾನ್ ವಶ ಪಡಿಸಿಕೊಳ್ಳಲಾಗಿದೆ. 51 ಸಾವಿರ ಮೌಲ್ಯದ 113.6 ಲೀಟರ್ ಮದ್ಯ ಜಪ್ತಿಪಡಿಸಿಕೊಂಡಿದ್ದು, 9 ಪ್ರಕರಣ ದಾಖಲಾಗಿವೆ ಎಂದರು.
ಈ ಸಂಧರ್ಭದಲ್ಲಿ ಎಎಸ್ಪಿ ಎನ್.ನವೀನ್ ಕುಮಾರ್ ಉಪಸ್ಥಿತರಿದ್ದರು.