ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಪೋಷಕರು ತಮ್ಮ ಮಕ್ಕಳಿಗೆ ಸಂವಿಧಾನವನ್ನು ಓದಿಸುವದರ ಮೂಲಕ ಸಂವಿಧಾನದ ಅರಿವು ಮೂಡಿಸಬೇಕು ಎಂದು ಮಾಜಿ ಸಚಿವ ಶ್ರೀ ರಾಮುಲು ಅವರು ಹೇಳಿದರು.
ನಗರದ ಕೆ.ಈ.ಬಿ ಫಂಕೇಷನ್ ಹಾಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬುದ್ಧ ಬಸವ ಅಂಬೇಡ್ಕರ್ ಮನೆ ಮನೆಗೆ ಮತ್ತು ಸಂವಿಧಾನ ಜನಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗವತ ಗೀತೆ, ಬೈಬಲ್, ಕುರಾನ್, ಪುರಾಣಗಳಿಗೆ ಯಾವ ರೀತಿ ಗೌರವಿಸುತ್ತೆವೆ ಹಾಗೆ ಬಾಬಾ ಸಾಹೇಬ ಅಂಬೇಡ್ಕರ್ ರವರು ಬರೆದ ಸಂವಿಧಾನಕ್ಕೆ ಕೂಡ ಗೌರವಿಸಬೇಕು. ಸಂವಿಧಾನದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಕೈ ಕಟ್ಟಿ ಕೂಳಿತ್ತಾರೆ ಆಗುವುದಿಲ್ಲ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.





