ಬೆಳಗಾಯಿತು ವಾರ್ತೆ |www.belagayithu.in
ಚಾಮರಾಜನಗರ: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದೊಂದಿಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 18 ಕಿಮೀ ಪಾದಯಾತ್ರೆ ಮಾಡಿದ್ದ ತುಮಕೂರು ಜಿಲ್ಲೆಯ ತಿಪಟೂರಿನ 102 ವರ್ಷದ ಪಾರ್ವತಮ್ಮ ಅವರಿಗೆ ಸಾಲೂರು ಶ್ರೀಗಳು ಸನ್ಮಾನಿಸಿದರು. ಮಳೆ ಬೆಳೆ ಆಗಲಿ, ರೈತರಿಗೆ ಒಳ್ಳೆದಾಗಲಿ, ಕಾಡು ಪ್ರಾಣಿಗಳಿಗೆ ನೀರು ಸಿಗಲಿ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾರ್ವತಮ್ಮ ಅವರು ಪಾದಯಾತ್ರೆ ಮಾಡಿದ್ದರು.
ತಲೆಬಾಗಿದ ಬಿವೈ ವಿಜಯೇಂದ್ರ
ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ, ಭಾರತದ ಮೂಲೆ ಮೂಲೆಯ ತಾಯಂದಿರು ಮತ್ತು ಸಹೋದರಿರು ಉತ್ತರ ನೀಡಿದ್ದಾರೆ. ಸಮೃದ್ಧವಾಗಿ ಮಳೆಯಾಗಲಿ ಮತ್ತು ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು 102 ವರ್ಷದ ಅಜ್ಜಿ ಕಠಿಣವಾದ ದಾರಿಯಲ್ಲಿ “ಮಲೆ ಮಹದೇಶ್ವರ ಬೆಟ್ಟ” ಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ಅಜ್ಜಿಯ ನಿಸ್ವಾರ್ಥ ಭಕ್ತಿ ಮತ್ತು ರಾಷ್ಟ್ರ ಮತ್ತು ನಮ್ಮ ಪ್ರಧಾನಿಯ ಮೇಲಿನ ಪ್ರೀತಿಗೆ ನಾವು ತಲೆಬಾಗುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.