ಬೆಳಗಾಯಿತು ವಾರ್ತೆ |www.belagayithu.in
ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಬ್ಯಾನ್ ಆಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ನಡೆಸಿರುವ ಸ್ಯಾಂಪಲ್ ಟೆಸ್ಟಿಂಗ್‌ನಲ್ಲಿ ವಿಷ ಹಾನಿಕಾರ ಅಂಶಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕಾಟನ್ ಕ್ಯಾಂಡಿನಲ್ಲಿ ʼರೊಡೊಮೇನ್ ಬಿʼ ಹಾನಿಕಾರಕ ಅಂಶ ಪತ್ತೆಯಾಗಿದೆ , ಗೋಬಿ ಮಂಚೂರಿಯಲ್ಲಿ ʼಸನ್ ಸೆಟ್ ಯೆಲ್ಲೋ, ಥರ್ಟಜೈನ್ʼ ಅಂಶ ಪತ್ತೆಯಾಗಿದೆ.
ಕಾಟನ್ ಕ್ಯಾಂಡಿನಲ್ಲಿ ರಾಸಾಯನಿಕ ಕಲಬೆರೆಕೆ ಇರೋದು ಕಲರ್ ಜೆಲ್ಲಿಗಳ ಟೆಸ್ಟಿಂಗ್‌ನಲ್ಲಿ ಪತ್ತೆಯಾಗಿದೆ. ಇಗಾಗಲೇ ರಿಪೋರ್ಟ್ ಆರೋಗ್ಯ ಇಲಾಖೆ ಕೈ ಸೇರಿದೆ ರಾಜ್ಯದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್ ಆಗುತ್ತಾ ಎನ್ನುವದನ್ನು ಕಾದು ನೋಡಬೇಕಾಗಿದೆ.ಸೋಮವಾರ ಅಧಿಕೃತವಾಗಿ ಆರೋಗ್ಯ ಸಚಿವರು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಗೋಬಿ ಮಂಚೂರಿ ಕಾಟನ್ ಕ್ಯಾಂಡಿ ಈಗಾಗಲೇ ಬ್ಯಾನ್ ಆಗಿದೆ .
ರೊಡಮೈನ್ ಬಿ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಏನು?
ರೊಡಮೈನ್ ಬಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಕಣ್ಣು ದೃಷ್ಟಿ ಸಮಸ್ಯೆ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಗೋಬಿಯಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚಿವೆ.