ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಜಿಲ್ಲೆಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವಲಯ ಕಚೇರಿಯಲ್ಲಿ ದೊಡ್ಡ ಮಟ್ಟದ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
2022 ರಿಂದ 2026ರ ಅವಧಿಯಲ್ಲಿ, ಮೂವರು ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳ ಕಾಲಘಟ್ಟದಲ್ಲಿ, ಗುತ್ತಿಗೆ ನೌಕರರು, ಇತರೆ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು ನಕಲಿ ಸಹಿಗಳನ್ನು ಬಳಸಿ ಮಂಡಳಿ ಖಾತೆಯಿಂದ ಸುಮಾರು ₹16.17 ಕೋಟಿ ಹಣವನ್ನು ಸಂಬಂಧವಿಲ್ಲದ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪ ಇದೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆ ನಲ್ಲಿ ಅಪರಾಧ ಸಂಖ್ಯೆ 65/2026 ಅಡಿ ಪ್ರಕರಣ ದಾಖಲಾಗಿದೆ. ವಂಚನೆ ವಿಷಯ ಅಂತರಿಕ ಲೆಕ್ಕಪರಿಶೋಧನೆಯ ವೇಳೆ ಪತ್ತೆಯಾಗಿದೆ.
ಪ್ರಸ್ತುತ ಪ್ರಕರಣ ಪ್ರಾಥಮಿಕ ತನಿಖೆಯ ಹಂತದಲ್ಲಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ವಂಚನೆಯ ಮೊತ್ತ ₹15 ಕೋಟಿಗೂ ಹೆಚ್ಚು ಇರುವುದರಿಂದ, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂದು ಎಸ್ಪಿ ಡಾ. ಸುಮನ್ ಡಿ ಪನ್ನೇಕರ್ ಅವರು ತಿಳಿಸಿದ್ದಾರೆ.





