ಬೆಳಗಾಯಿತು ವಾರ್ತೆ |www.bealagayithu.in
ಹೊಸಪೇಟೆ: ತುಂಗಭದ್ರಾ ಆಣೆಕಟ್ಟು ಮತ್ತು ಅದರ ಉದ್ಯಾನಗಳಿಗೆ ಸಾರ್ವಜನಿಕರಿಗೆ ಮತ್ತು ಸಂದರ್ಶಕರ ಪ್ರವೇಶಕ್ಕೆ ಹೊರಡಿಸಿದ್ದ ನಿರ್ಬಂಧವನ್ನು ತುಂಗಭದ್ರ ಮಂಡಳಿಯು ತೆರವುಗೊಳಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.
ತುಂಗಭದ್ರ ಜಲಾಶಯದ 19ನೇ ಕ್ರಸ್ಟ್ ಗೇಟ್ ಮರುಸ್ಥಾಪಿಸಲು ಅನುಕೂಲವಾಗುವಂತೆ ಅಣೆಕಟ್ಟು ಸೈಟ್ ಮತ್ತು ಅದರ ಆವರಣಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಮರುಸ್ಥಾಪನೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾರಣ ತುಂಗಭದ್ರಾ ಅಣೆಕಟ್ಟು ಮತ್ತು ಅದರ ಉದ್ಯಾನಗಳಿಗೆ ಸಾರ್ವಜನಿಕರಿಗೆ ಮತ್ತು ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ ಎಂದು ತುಂಗಭದ್ರ ಜಲಾಶಯ ಮಂಡಳಿಯ ಕಾರ್ಯದರ್ಶಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.





