3,393 ಮತದಾರರ ಪೈಕಿ 409 ಶಿಕ್ಷಕರಿಂದ ಮತದಾನ
ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಗ್ಗೆಯಿಂದ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಶೇ.12.05ರಷ್ಟು ಮತದಾನ ದಾಖಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 3,393 ನೋಂದಾಯಿತ ಮತದಾರರಿದ್ದು, ಅವರಲ್ಲಿ 1,813 ಪುರುಷರು ಹಾಗೂ 1,580 ಮಹಿಳೆಯರಿದ್ದಾರೆ. ಬೆಳಗ್ಗೆ 10 ಗಂಟೆಯವರೆಗೆ 239 ಪುರುಷರು ಮತ್ತು 170 ಮಹಿಳೆಯರು ಸೇರಿದಂತೆ ಒಟ್ಟು 409 ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತಗಟ್ಟೆವಾರು ಮತದಾನ ವಿವರ
ಬಳ್ಳಾರಿ ನಗರದ ನೂತನ ಜಿಲ್ಲಾಡಳಿತ ಭವನದ ತಾಲೂಕು ಕಚೇರಿಯ ಮತಗಟ್ಟೆಯಲ್ಲಿ 125 ಮತಗಳು ಚಲಾವಣೆಯಾಗಿವೆ. ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನ ಭಾಗ-2ರಲ್ಲಿ 88 ಹಾಗೂ ಭಾಗ-2ಎಯಲ್ಲಿ 31 ಮತಗಳು ದಾಖಲಾಗಿವೆ.
ಕಂಪ್ಲಿ ಪುರಸಭೆ ಕಚೇರಿಯಲ್ಲಿ 30, ಕುರುಗೋಡು ತಾಲೂಕು ಕಚೇರಿಯಲ್ಲಿ 2, ಸಂಡೂರು ತಾಲೂಕು ಕಚೇರಿಯಲ್ಲಿ 22, ಸಿರುಗುಪ್ಪ ತಾಲೂಕು ಕಚೇರಿಯಲ್ಲಿ 23, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ 3 ಹಾಗೂ ಕರೂರು ನಾಡಕಚೇರಿಯಲ್ಲಿ 1 ಮತ ಚಲಾವಣೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಳಗ್ಗೆಯಿಂದಲೇ ಶಿಕ್ಷಕ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದು, ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಂದುವರಿದಿದೆ.





