ವಿವಿಧ ಮಠಗಳ ಭಕ್ತರು, ವಿಪ್ರ ಬಾಂಧವರಿಂದ ಭಕ್ತಿ ಸಮರ್ಪಣೆ
ಬೆಳಗಾಯಿತು ವಾರ್ತೆ
ಬಳ್ಳಾರಿ: ಶ್ರೀ ಮಧ್ವಾಚಾರ್ಯರ ಜಯಂತ್ಯುತ್ಸವದ ನಿಮಿತ್ತ ನಗರದಲ್ಲಿ ಬುಧವಾರ ಸಂಜೆ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಗ್ರಂಥಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಆರಂಭವಾದ ಮೆರವಣಿಗೆಯು ಸಂಗಮ್ ವೃತ್ತದ ಮೂಲಕ ಸಾಗಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಮಠವನ್ನು ತಲುಪಿತು. ಶ್ರೀಮದುತ್ತರಾದಿ ಮಠ, ರಾಯರ ಮಠ, ವ್ಯಾಸರಾಜರ ಮಠ, ಶಂಕರ ಮಠ, ಕಣ್ವ ಮಠ ಸೇರಿದಂತೆ ವಿವಿಧ ಮಠಗಳ ಭಕ್ತರು ಹಾಗೂ ಸರ್ವ ವಿಪ್ರ ಬಾಂಧವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.
ನಗರದ ವಿವಿಧ ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ ಹಾಗೂ ಕೋಲಾಟ ಕಾರ್ಯಕ್ರಮಗಳು ಜರುಗಿದವು. ಭಕ್ತಿಗೀತೆಗಳು, ಭಜನೆ ಮತ್ತು ಕೋಲಾಟ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ವಿಪ್ರ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ಮಧ್ವಾಚಾರ್ಯರಿಗೆ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಡಿ. ಶ್ರೀನಾಥ್, ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತಾಧಿಕಾರಿ ಪಂ. ಪ್ರಸನ್ನಾಚಾರ ಐ.ಜಿ., ಹತ್ತಿ ಬೆಳಗಲ್ ಗುರುರಾಜ್ ಆಚಾರ್, ಶ್ರೀ ಉತ್ತರಾಧಿ ಮಠದ ಪಂ. ಪ್ರವೀಣ್ ಆಚಾರ್, ನವೀನ್ ಆಚಾರ್, ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಆರ್. ಪ್ರಕಾಶ್ ರಾವ್, ಕಾರ್ಯದರ್ಶಿ ಬಿ.ಕೆ.ಬಿ.ಎನ್. ಮೂರ್ತಿ, ಗೌರವಾಧ್ಯಕ್ಷ ಡಾ. ಬಿ.ಕೆ. ಸುಂದರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕಲ್ಲಿನಾಥ್, ಮಧ್ವ ಸಂಘದ ಲಕ್ಷ್ಮಣ ರಾವ್, ವ್ಯಾಸರಾಜ ಮಠದ ಪಾಂಡುರಂಗ ಆಚಾರ್, ಜಿತೇಂದ್ರ ಆಚಾರ್, ಮೋಹನ್ ಆಚಾರ್, ನ್ಯಾಯವಾದಿ ಡಾಣಾಪುರ ಶ್ರೀನಿವಾಸ್, ಕಣೆಕಲ್ ಶ್ರೀಧರ್, ನ್ಯಾಯವಾದಿ ರಾಘವೇಂದ್ರ ಮೋಹನ್, ಡಿ. ಗಿರಿ, ವೆಂಕೋಬರಾವ್, ಜಯಸಿಂಹ, ಡಾ. ವಿದ್ಯಾಧರ್ ಕಿನ್ನಾಳ್, ಸಿಮೆಂಟ್ ಗಿರಿ ಸೇರಿದಂತೆ ಬ್ರಾಹ್ಮಣ ಸಮಾಜದ ನೂರಾರು ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.





