28.4 C
Bellary
Wednesday, March 12, 2025

Localpin

spot_img

ಡಿ.೨೩ರಿಂದ ೨೫ರ ವರೆಗೆ ನೀನಾಸಮ್ -ಧಾತ್ರಿ ನಾಟಕ ಪ್ರದರ್ಶನ

ಬೆಳಗಾಯಿತು ವಾರ್ತೆ
ಬಳ್ಳಾರಿ: ನಾಟಕ ಕೇವಲ ಮನರಂಜನೆಗಲ್ಲ ಮನೋವಿಕಾಸಕ್ಕೆ ಎಂದು ಸದಾ ಪ್ರತಿಪಾದಿಸುವ ರಂಗತೋರಣ ಸಂಸ್ಥೆ ವತಿಯಿಂದ ನೀನಾಸಂ ಹಾಗೂ ಧಾತ್ರಿ ರಂಗ ಸಂಸ್ಥೆಗಳ ಜೊತೆಗೂಡಿ ಡಿ. ೨೩ರಿಂದ ೨೫ರ ವರೆಗೆ ೩ ನಾಟಕಗಳನ್ನು ನಗರದ ಮೋಕ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ನಗರದ ರಂಗತೋರಣ ಕಲಾಮಂದಿರದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಅವರು ಹೇಳಿದರು.

ನಗರದ ಮರ್ಚೆಡ್ ಹೋಟೆಲ್ ನಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿರು.
ಕಳೆದ ಮೂರು ವರ್ಷಗಳಿಂದ ಯಾವುದೇ ನಾಟಕಗಳು ಪ್ರದರ್ಶನಗೊಂಡಿಲ್ಲ ಈ ನಿಟ್ಟಿನಲ್ಲಿ ನಾಟಕ ಪ್ರೇಮಿಗಳು ನಿರಾಸೆಗೊಂಡಿದ್ದರು. ಆದರೆ ಇಗ ನೀನಾಸಮ್ ಮತ್ತು ಧಾತ್ರಿ ನಾಟಕಗಳು ಕಲಾ ಪ್ರೇಮಿಗಳಿಗೆ ಮನರಂಜನೆ ನೀಡಲಿದೆ ಎಂದರು.
ಈ ಮೂರು ದಿನ ನಡೆಯುವ ನಾಟಕ ಪ್ರದರ್ಶನಕ್ಕೆ ಬಳ್ಳಾರಿಯ ಮುಖಂಡರುಗಳು ಚಾಲನೆ ನೀಡಲಿದ್ದಾರೆ. ಹಾಗಾಗಿ ನಾಟಕವನ್ನು ನೋಡುವುದರ ಮೂಲಕ ಜಾನಪದ ಕಲೆಗಾರರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಗಂಗಾಧರ ದುರ್ಗಂ, ವೆಂಕಟೇಶ್ ಬಡಿಗೇರ ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles