ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಬಳ್ಳಾರಿಯ ಗಾಂಧಿನಗರದ ಶ್ರೀರಾಮಕೃಷ್ನ ವಿವೇಕಾನಂದ ಮಿಷನ್ ಆಶ್ರಮಕ್ಕೆ 10 ಲಕ್ಷ ರೂ. ಧನ ಸಹಾಯ ನೀಡುವುದಾಗಿ ಶಾಸಕ ನಾರಾ ಭರತ್ ರೆಡ್ಡಿ ಅವರು ಘೋಷಿಸಿದರು.
ಸೋಮವಾರ ಸಂಜೆ ಗಾಂಧಿನಗರದ ಆಶ್ರಮದಲ್ಲಿ ಏರ್ಪಡಿಸಿದ್ದ ಆಶ್ರಮ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲ್ಕತ್ತಾದ ಶ್ರೀರಾಮಕೃಷ್ನ ವಿವೇಕಾನಂದ ಆಶ್ರಮ ಮಿಷನ್’ಗೆ ಗಾಂಧಿನಗರದ ಆಶ್ರಮವನ್ನು ಹಸ್ತಾಂತರಿಸಿದ್ದು, ಆಶ್ರಮದ ಅಭಿವೃದ್ಧಿಗೆ ನಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ 10 ಲಕ್ಷ ರೂ.ಗಳನ್ನು ನೀಡಲಾಗುವುದು, ಜೊತೆಗೆ ಆಶ್ರಮದ ನಿರ್ವಹಣೆಗಾಗಿ ಸಾಧುಗಳ ವಸತಿಗಾಗಿ ಶಾಸಕರ ನಿಧಿಯಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಶ್ರೀಮಂಗಳನಾಥಾನಂದಜಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಎಂಎಲ್ಸಿ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಶ್ರೀಧರ್ ಭುವನಗಿರಿ, ಪೃಥ್ವಿರಾಜ್ ಭೂಪಾಲ್, ಮೇಯರ್ ಗಾದೆಪ್ಪ, ಅಲ್ಲಂ ಪ್ರಶಾಂತ್, ಚಾನಾಳ್ ಶೇಖರ್ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರು, ಮತ್ತಿತರರು ಹಾಜರಿದ್ದರು.





