ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬುಧವಾರ ಸಂಜೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಗರದ ಗಾಂಧಿನಗರ ಮಾರ್ಕೆಟ್, ಪಾರ್ವತಿ ನಗರ, ವಾಲ್ಮೀಕಿ ವೃತ್ತ ಸಮೀಪದ ಪ್ರದೇಶ, ಬಂಡೀಮೋಟ್, 9ನೇ ವಾರ್ಡಿನ ಉರ್ದು ಶಾಲೆ ಬಳಿಯ ಕಾಲುವೆ ಸೇರಿದಂತೆ 9, 16 ಹಾಗೂ 17ನೇ ವಾರ್ಡುಗಳನ್ನು ಸಂಪರ್ಕಿಸುವ ಮುಖ್ಯ ಕಾಲುವೆಯನ್ನು ಶಾಸಕ ಭರತ್ ರೆಡ್ಡಿ ಪರಿಶೀಲಿಸಿದರು. ಮಳೆಯಿಂದ ಉಂಟಾದ ಸಮಸ್ಯೆಗಳು, ನೀರು ನಿಂತಿರುವ ಪ್ರದೇಶಗಳು ಹಾಗೂ ಕಾಲುವೆಗಳ ಸ್ಥಿತಿಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಳೆ ನೀರು ಸರಾಗವಾಗಿ ಹರಿಯುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ರಸೂಲ್, ರಾಮು, ಪ್ರದೀಪ್ ಹಾಗೂ ಅಧಿಕಾರಿಗಳಾದ ಮಲ್ಲನಗೌಡ, ಗೋವರ್ಧನ್, ಮಹೇಶ್, ಶ್ರೀನಿವಾಸ್, ವೀರೇಶ್, ಶ್ರೀನಾಥ್, ಮುನಾಫ್ ಪಟೇಲ್, ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





