ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ 3ನೇ ವಾರ್ಡಿನ ಎಪಿಎಂಸಿ ಸರ್ಕಲ್’ನಿಂದ ಡಿವೈಎಸ್ಪಿ ಕಚೇರಿವರೆಗೆ ವಯಾ ಬೆಂಕಿ ಮಾರೆಮ್ಮ ದೇವಸ್ಥಾನದ ರಸ್ತೆಗೆ ಅಂದಾಜು 4.50 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು. ಈ ಸಂದರ್ಭ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಾಸು ರೆಡ್ಡಿ, ಸ್ಥಳೀಯರಾದ ಭರತ್, ಕವಿತಾ, ಕುಮಾರನ್ ಮತ್ತಿತರರು ಹಾಜರಿದ್ದರು.

ಅದೇ ರೀತಿ ಬಳ್ಳಾರಿಯ 7ನೇ ವಾರ್ಡಿನ ಬಾಪೂಜಿ ನಗರದ ಕಮೇಲಾ ಆಸ್ಪತ್ರೆಯ ಪಕ್ಕದಿಂದ ಮುಖ್ಯ ಕಾಲುವೆ, ರಸ್ತೆ ಹಾಗೂ ಬಾಪೂಜಿ ನಗರ ಸರ್ಕಲ್ ಬಳಿ ಕಲ್ವರ್ಟ್ ನಿರ್ಮಾಣಕ್ಕಾಗಿ 1.50 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಈ ಸಂದರ್ಭ ವಾರ್ಡಿನ ಮುಖಂಡ ಶಿವರಾಜ್, ಭರತ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಸ್ಥಳೀಯ ಮುಖಂಡರಾದ ಬಾಲರಾಜು, ಬುಜ್ಜಿ, ಸತೀಶ್, ಕವಿತಾ ಮತ್ತಿತರರು ಹಾಜರಿದ್ದರು.

ತದನಂತರ ಬಳ್ಳಾರಿಯ 8ನೇ ವಾರ್ಡಿನ ಆರ್ಡರ್ ಗೇಟ್ ಸರ್ಕಲ್’ ಗಂಗಮ್ಮ ನಾಲಾವರೆಗೆ ರಸ್ತೆ ನಿರ್ಮಾಣಕ್ಕಾಗಿ 4 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರು ಚಾಲನೆ ನೀಡಿದರು.
ಈ ಸಂದರ್ಭ ವಾರ್ಡಿನ ಸದಸ್ಯ ರಾಮಾಂಜನೇಯ, ಮುಖಂಡರಾದ ಸುಬ್ಬರಾಯುಡು, ಫಕ್ಕೀರಪ್ಪ, ಯರ್ರಿಸ್ವಾಮಿ, ವೆಂಕಟರಾಮರೆಡ್ಡಿ, ವಿಷ್ಣು, ಆನಂದ ರೆಡ್ಡಿ, ಸುರೇಶಬಾಬು, ವಿ.ವೆಂಕಟೇಶುಲು ಮತ್ತಿರರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles