ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಸುಮಾರು ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಳ್ಳಾರಿ ಎಎಚ್‌ಟಿಯು ತಂಡವು ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆ ಹಚ್ಚಿ ಕುಟುಂಬಕ್ಕೆ ಒಪ್ಪಿಸಿದೆ.
ದಿನಾಂಕ 10.10.2023 ರಂದು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಮಹಿಳೆ ಹಾಗೂ ಅಪ್ರಾಪ್ತ ಬಾಲಕ ಕಾಣೆಯಾದ ಕುರಿತು ಅಪರಾಧ ಸಂಖ್ಯೆ 153/2023 ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಪತ್ತೆ ಕಾರ್ಯಾಚರಣೆಗೆ ಬಳ್ಳಾರಿ ಎಂಟಿ-ಹ್ಯೂಮನ್ ಟ್ರಾಫಿಕಿಂಗ್ ಯುನಿಟ್‌ಗೆ ವರ್ಗಾಯಿಸಲಾಗಿತ್ತು.
ದಿನಾಂಕ 27.04.2026 ರಂದು ಎಎಚ್‌ಟಿಯು ಸಿಬ್ಬಂದಿಗಳಾದ ಎ.ವಿ. ಮಾರುತಿ, ರಾಮಲಿಂಗಪ್ಪ ಹಾಗೂ ನೂರ್ ಜಹಾನ್ ಅವರ ತಂಡವು ತೋರಣಗಲ್ಲು ನಿವಾಸಿ, 25 ವರ್ಷದ ಗೃಹಿಣಿ ಶ್ರೀಮತಿ ರಾಧಾ ಹಾಗೂ ಅವರ 7 ವರ್ಷದ ಮಗನನ್ನು ವಿಜಯವಾಡದಲ್ಲಿ ಪತ್ತೆ ಮಾಡಿತು.
ಪತ್ತೆಯಾದ ಮಹಿಳೆ ಹಾಗೂ ಮಗುವನ್ನು ದೂರುದಾರರಿಗೆ ಒಪ್ಪಿಸಲಾಗಿದ್ದು, ಸುಮಾರು ಎರಡು ವರ್ಷಗಳ ಬಳಿಕ ಯಶಸ್ವಿಯಾಗಿ ಪತ್ತೆ ಹಚ್ಚಿದ ಎಎಚ್‌ಟಿಯು ತಂಡದ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.






