ಬೆಳಗಾಯಿತು ವಾರ್ತೆ |www.bealagayithu.in
ಸಿರಗುಪ್ಪ: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧಿಸಿದ ಹಿನ್ನಲೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪಪಟ್ಟಣದಲ್ಲಿ ನಡೆದಿದೆ. ರಾಜು (23) ಹಾಗೂ ಪವಿತ್ರಾ(20) ಮೃತ ದುರ್ಧೈವಿಗಳು. ಮೃತರಿಬ್ಬರೂ ಸಿರಗುಪ್ಪ ಪಟ್ಟಣದ ನಿವಾಸಿಗಳಾಗಿದ್ದು, ಅನ್ಯ ಜಾತಿಯವರಾಗಿದ್ದಕ್ಕೆ ಎರಡೂ ಮನೆಯಲ್ಲಿ ಮದುವೆಗೆ ವಿರೋಧ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತಡ ರಾತ್ರಿ ಮನೆ ಬಿಟ್ಟು ಹೊರ ಬಂದಿದ್ದ ರಾಜು ಹಾಗೂ ಪವಿತ್ರಾ, ಪೋಷಕರ ವಿರೋಧಕ್ಕೆ ಮನನೊಂದು ಬೆಳಗಿನ ಜಾವ ಜಮೀನೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





