ಕಿರುತೆರೆಯ ವೀಕ್ಷಕರಿಗೆ ಮರಂಜನೆಯ ಹೊಸತೊಂದು ದಿಕ್ಕನ್ನ ತೋರಿಸಿದ ಕರುನಾಡಿನ ನಂ.೧ ವಾಹಿನಿ ಜೀ಼ ಕನ್ನಡ, ಪ್ರತಿ ವರ್ಷ ತನ್ನ ವಾಹಿನಿಯ ಅತಿ ದೊಡ್ಡ ಪುರಸ್ಕಾರ ಕಾರ್ಯಕ್ರಮ ಜೀ಼ ಕುಟುಂಬ ಅರ್ವಾಡ್ಸ್ ನ್ನು ಅದ್ದೂರಿಯಾಗಿ ನಡೆಸುತ್ತಾ ಬಂದಿದೆ. ಅದರಂತೆ ಈ ವರ್ಷವು ಕೂಡ ತಮ್ಮ ಏಳಿಗೆಯಲ್ಲಿ ಶ್ರಮಿಸಿದ ಕಲಾವಿದರು,ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ತಂತ್ರಜ್ಞರನ್ನ ಅಭಿನಂದಿಸಿ ಸನ್ಮಾನಿಸೋ ತನ್ನ ಕೆಲಸವನ್ನ ಮುಂದುವರಿಸುವ ನಿಟ್ಟಿನಲ್ಲಿ ಅಭಿಮಾನಿಗಳ ಬಳಿಗೆ ಬರಲು ತಯಾರಿ ನಡೆಸಿದೆ.
ಈಗಾಗಲೇ ತಮ್ಮ ಅಭಿನಯ ಮತ್ತು ಕ್ರಿಯಾಶೀಲತೆಯ ಮೂಲಕ ಜನ ಮಾನಸದಲ್ಲಿ ಹೆಸರು ಮಾಡಿರುವ ಕಲಾವಿದರು,ತಂತ್ರಜ್ಞರು ಸೇರಿದಂತೆ ಜೀ಼ ಕನ್ನಡ ವಾಹಿನಿಯ ಸದಸ್ಯರನ್ನ ಗೌರವಿಸೋ ನಿಟ್ಟಿನಲ್ಲಿ ಜೀ಼ ಕುಟುಂಬ ಅರ್ವಾಡ್ಸ್ 2023 ಕ್ಕೆ ಓಟಿಂಗ್ ಪ್ರಕ್ರಿಯೇ ನಡೆಯಲಿದೆ.
ಇದೇ ತಿಂಗಳ ಕೊನೆಯ ವಾರದಲ್ಲಿ ಜೀ಼ ಕುಟುಂಬ ಅರ್ವಾಡ್ಸ್ 2023ಕ್ಕೆ ಕಾರ್ಯಕ್ರಮ ನಡೆಯಲ್ಲಿದ್ದು,ಕರುನಾಡಿನ 31 ಜಿಲ್ಲೆಗಳಿಗು ಜೀ಼ ಕನ್ನಡ ವಾಹಿನಿಯ ಅಭಿಮಾನದ ತೇರು ಸಂಚರಿಸುವ ಮೂಲಕ ನಿಮ್ಮ ಅಮೂಲ್ಯವಾದ ಮತವನ್ನ ಸಂಗ್ರಹಿಸಲಿದೆ, ಜಿಲ್ಲೆಗಳ ಆಯ್ದ ಭಾಗಗಳಲ್ಲಿ ಈ ಓಟಿಂಗ್ ಪ್ರಕ್ರಿಯೇ ನಡೆಯಲ್ಲಿದ್ದು ಅಭಿಮಾನಿಗಳು ತಮ್ಮ ಮೆಚ್ಚಿನ ಧಾರಾವಾಹಿ, ರಿಯಾಲಿಟಿ ಶೋ,ನಾಯಕ,ನಾಯಕಿ,ಜೋಡಿ ಸೇರಿದಂತೆ ಹತ್ತು ಹಲವು ವಿಭಾಗಗಳಿಗೆ ವೋಟಿಂಗ್ ಮೂಲಕ ತಮ್ಮ ಪ್ರೀತಿ ಮತ್ತು ಅಭಿಮಾನವನ್ನ ನೀಡಿ ತಮ್ಮವರನ್ನ ಗೆಲ್ಲಿಸಿ ಪುರಸ್ಕಾರಕ್ಕೆ ಭಾಜನಾರಾಗುವಂತೆ ಮಾಡಬಹುದಾಗ್ಗಿದ್ದು, ಮತ ಪೆಟ್ಟಿಗೆಯನ್ನು ಹೊತ್ತ ಜೀ಼ ಕನ್ನಡದ ಅಭಿಮಾನದ ತೇರನ್ನ ಜೀ಼ ಕುಟುಂಬದ ಎಲ್ಲಾ ಸದಸ್ಯರು ಹಸಿರು ನಿಶಾನೆ ತೋರುವ ಮುಖಾಂತರ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಿಂದ ಹೊರಟಿರುವ ಈ ವಾಹನ, ಸುಮಾರು ೨ ವಾರಗಳ ಕಾಲ ನಾಡಿನಾದ್ಯಂತ ಸಂಚರಿಸಲಿದ್ದು ಇದೇ 24 ಮಂಗಳವಾರ ದಂದು ಹೊಸಪೇಟೆ, ಬಳ್ಳಾರಿ,ಕೂಡ್ಲಿಗಿ,ಮಾರ್ಗದಲ್ಲಿ ಸಂಚರಿಸಲಿದೆ.