ಬೆಳಗಾಯಿತು ವಾರ್ತೆ | Www.belagayithu.in
ಕುರುಗೋಡು : ಕುಮಾರಸ್ವಾಮಿ ಅವರನ್ನು ಜಮೀರ್ ಅಣ್ಣ ಪ್ರೀತಿಯಿಂದ ‘ಕರಿಯಣ್ಣ’ ಎಂದಿದ್ದಾರೆ. ಜಮೀರ್ ಅಣ್ಣನನ್ನು ಕುಮಾರಣ್ಣ ‘ಕುಳ್ಳ’ ಎನ್ನುವ ಮಾತು ಇವರಿಬ್ಬರ ಸ್ನೇಹ ವಿಶ್ವಾಸದ ಮಾತುಗಳು ಈ ಮಾತುಗಳನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಹೇಳಿದರು.
ಪಟ್ಟಣ ಸಮೀಪದ ಕಲ್ಲುಕಂಭ, ಶ್ರೀನಿವಾಸ್ ಕ್ಯಾಂಪ್, ಕ್ಯಾದಿಗೆಹಾಳು ಮತ್ತು ಅನ್ನಪೂರ್ಣೇಶ್ವರಿ ಕ್ಯಾಂಪ್ ಗ್ರಾಮದಲ್ಲಿ ಶನಿವಾರ 2023-24ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 2 ಕೋಟಿ ವೆಚ್ಚ ದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಂಪ್ಲಿ, ಕುರುಗೋಡು ತಾಲೂಕಿನ ಸಮಗ್ರ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ, ಗುಣಮಟ್ಟದ ರಸ್ತೆ ಚರಂಡಿ ನಿರ್ಮಾಣ ಹಾಗೂ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಭಿವೃದ್ಧಿಯೇ ನಮ್ಮ ಸರ್ಕಾರದ ಕಾರ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಪಿಡಿಓ ದೇವರಾಜ್, ಗುತ್ತಿಗೆದಾರರು, ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.