ಬೆಳಗಾಯಿತು ವಾರ್ತೆ
ಬಳ್ಳಾರಿ: ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ಐಟಿ ತಂಡ ಬಳ್ಳಾರಿಯ ಶ್ರೀನಿವಾಸ್ ಕನ್ಸಟ್ರಕ್ಷನ್ಸ್ ಮಾಲಿಕರ ಮನೆ ಮೇಲೆ ದಾಳಿ ಮಾಡಿದ್ದಾರೆ.
ಶ್ರೀನಿವಾಸ್ ಕನ್ಸಟ್ರಕ್ಷನ್ಸ್ ಮಾಲೀಕರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಹಿನ್ನೆಲೆಯಲ್ಲಿ ರೈಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಿಚ್ಚೇಶ್ವರ ರಾವ್ ಎಂಬುವವರು ರಸ್ತೆ, ಕ್ಯಾನಲ್ ಸೇರಿದಂತೆ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟ್ ಮಾಡಿದ್ದು, ಇವರು ಅಪಾರ ಆಸ್ತಿಯನ್ನು ಮಾಡಿದ್ದಾರೆ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ಮಾಡಲಾಗಿದೆ.