23.5 C
Bellary
Friday, September 29, 2023

Localpin

spot_img

ಸರ್ಕಾರ ಬರಗಾಲ ಘೋಷಿಸದೇ ಇರುವುದು ಸರಿಯಲ್ಲ

ಬಳ್ಳಾರಿ: ಕೇಂದ್ರ ಸರ್ಕಾರ ನಿಯಮಾವಳಿಗಳ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೇ ಇರುವುದು ಸರಿಯಲ್ಲ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ಹೇಳಿದರು.

ನಗರದ ನೂತನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾ ತಾಲ್ಲೂಕ, ಬಳ್ಳಾರಿ ಜಿಲ್ಲಾ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಿಲುವು ವಿರೋಧಿಸಿ ಬಿಜೆಪಿ ಪಕ್ಷದ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರು ಲಿಂಗನ ಗೌಡ ಮತ್ತು ನಗರ ಘಟಕದ ಅಧ್ಯಕ್ಷರಾದ ಸತ್ಯ ನಾರಾಯಣ ಅವರ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ಮಾತನಾಡಿ ರಾಜ್ಯದಲ್ಲಿ 134 ತಾಲ್ಲೂಕುಗಳನ್ನು ಬರಗಾಲ ತಾಲ್ಲೂಕು ಎಂದು ಘೋಷಣೆ ಮಾಡಬೇಕಿತ್ತು ಆದರೆ ಇದುವರೆಗೂ ಮಾಡಿಲ್ಲ ಕೇಂದ್ರ ಸರ್ಕಾರ ನಿಯಮಾವಳಿಗಳ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೇ ಇರುವುದು ಸರಿಯಲ್ಲ ಆದಷ್ಟು ಬೇಗ ಬರಗಾಲ ಘೋಷಿಸಿ ರೈತರನ್ನು ಕಾಪಾಡ ಬೇಕು ಎಂದರು.

ಕಾಂಗ್ರೆಸ್ ಸರ್ಕಾರ ರಚನೆಯಾಗಿ ನೂರು ದಿನ ಪೂರೈಸಿದೆ. ಕೇಂದ್ರದಿಂದ ಕಿಸಾನ್ ಸನ್ಮಾನ ಯೋಜನೆಯಡಿ ಕೊಡುವ 6000ರೂಪಾಯಿಯನ್ನು ನಿಲ್ಲಿಸಲಾಗಿದೆ. ನೀರಾವರಿ ಯೋಜನೆ ನಿರ್ಲಕ್ಷ್ಯ ಮಾಡಲಾಗಿದೆ.ಎಪಿಎಂಸಿ ಕಾಯ್ದೆಯಿಂದ ಹಿಂಪಡೆದರು, ವಿದ್ಯಾಸಿರಿ ಯೋಜನೆ ನಿಲ್ಲಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಜಿಲ್ಲಾ ಅಧ್ಯಕ್ಷರಾದ ಮುರಹರಿ ಗೌಡ, ಹಿರಿಯ ಮುಖಂಡರಾದ ಹನುಮಂತಪ್ಪ, ರಾಮಲಿಂಗಪ್ಪ, ತಿಮ್ಮಾರೆಡ್ಡಿ,ರಾಜು ಸೇರಿದಂತೆ ಮತ್ತಿತರ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,874FollowersFollow
0SubscribersSubscribe
- Advertisement -spot_img

Latest Articles