ಸರ್ಕಾರದಿಂದ ಸಮುದಾಯಗಳಿಗೆ ಅನ್ಯಾಯ:ಶ್ರೀರಾಮುಲು

ಬೆಳಗಾಯಿತು ವಾರ್ತೆ |www.belagayithu.in
ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಟಿ, ಎಸಿ.ಟಿ ಸಮುದಾಯಕ್ಕೆ ಅನ್ಯಾಯ ಮಾಡುವಂತ ಕೆಲಸವನ್ನು ಇಂದು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವರಾದ ಶ್ರೀರಾಮುಲು ಅವರು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಲಯ ಜಗನ್ನಾಥ ಭವನದಲ್ಲಿ ಶನಿವಾರದಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲಾ ಇಲಾಖೆಗಳಲ್ಲಿ 24 ಪರ್ಸೆಂಟ ಹಣವನ್ನು ತೆಗೆದಿಟ್ಟಿರಬೇಕು ಎನ್ನುವ ಕಾರಣದಿಂದ ಸಮುದಾಯದ ಮೂಲಭೂತ ಸೌಕರ್ಯಗಳಿಗೆ, ಗಂಗಕಲ್ಯಾಣ ಯೋಜನೆಗೆ ಹಣವನ್ನು ಇರಿಸಲಾಗುತ್ತಿತು, ಆದರೆ ಸಮುದಾಯದ ಹಣವನ್ನು ಸರ್ಕಾರ ಬೇರೆ ಬೇರೆ ಉದ್ದೇಶಕ್ಕಾಗಿ ಬಳಕೆಮಾಡಿಕೊಂಡಿದೆ ಎಂದು ಆರೋಪಿಸಿದರು.
ಕಳೆದ ವರ್ಷ 11 ಸಾವಿರ ಕೋಟಿ ಮಾಯವಾಗಿದೆ, ಈ ವರ್ಷದಲ್ಲಿ 14 ಸಾವಿರ ಕೋಟಿ ರೂ. ಹಣ ಒಟ್ಟು 25 ಸಾವಿರ ಕೋಟಿ ಹಣ ದಲಿತರ ನೆರವಿಗೆ ಬೇಕಾದ ಹಣವನ್ನು ಕಾಂಗ್ರೆಸ್‌ ಸರ್ಕಾರ ದುರಬಳಕೆ ಮಾಡಿಕೊಂಡಿದೆ.
ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು,ಈ ಕೇಸ್‌ನಲ್ಲಿ ಸಿ.ಎಂ ಅವರ ಕೈವಾಡವಿದೆ ಎನ್ನವ ಅನುಮಾನವಿದೆ, ಸಿದ್ದರಾಮಯ್ಯ ಆವರು ರಾಜೇನಾಮೆಯನ್ನು ನೀಡಲೇಬೇಕು ಎಂದು ಆಗ್ರಹಿಸಿದರು. ನಾಗೇಂದ್ರ ಅವರ ಮೇಲೆ ವೈಕ್ತಿಕ ದ್ವೇಷವಿಲ್ಲ , ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅದಕ್ಕಾಗಿ ನಮಗೇನು ಸಮಾಧನವಿಲ್ಲ ,ನಮ್ಮ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬಿ. ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್, ಎಸ್. ಟಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಬಂಗಾರು ಹನುಮಂತು ಇನ್ನೀತರರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles