29.9 C
Bellary
Sunday, February 2, 2025

Localpin

spot_img

ಬಾಣಂತಿಯರ ಸಾವು ಪ್ರಕರಣ: ಆರೋಗ್ಯ ಸಚಿವ ಭರವಸೆ

ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ: ಜಿಲ್ಲಾ ಆಸ್ಪತ್ರೆಯಲ್ಲಿ ಐದು ಜನ ಬಾಣಂತಿಯರು ಸಾವನ್ನಪ್ಪಿದ್ದಕ್ಕೆ ಸೂಕ್ತ ಕ್ರಮಕ್ಕೆ, ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಆಸ್ಪತ್ರೆ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭೇಟಿ ನೀಡಿ. ರಾಮುಲು ಅವರನ್ನು ಭೇಟಿ ಮಾಡಿ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು.

ಬಿ.ಶ್ರೀರಾಮುಲು ಮಾತನಾಡಿ, ಬಾಣಂತಿಯರ ಸಾವು ನಿಲ್ಲಬೇಕು. ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕಿಲ್ಲ. ಆದರೆ ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕು. ರಾಜ್ಯದಲ್ಲಿ ನೂರಾರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಗುಣ ಮಟ್ಟದ ಔಷಧಿ ಖರೀದಿ ಆಗಬೇಕು. ಪಶ್ಚಿಮ ಬಂಗಾಲದ ಕಂಪನಿಯ ಪ್ಲೂಯಿಡ್ ನಿಂದ ಸತ್ತಿದ್ದಾರೆ ಎಂಬ ಮಾಹಿತಿ ಇದೆ. ವೈದ್ಯರ ನಿರ್ಲಕ್ಷ ಅಲ್ಲ. ಸರಕಾರದ ಲೋಪ ಎಂದರು.

ಈ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನಿಂದ ಜನ ಭಯಬಿದ್ದು ಇಲ್ಲಿಗೆ ಬರದಂತಾಗಿದೆ. ಎಷ್ಟು ಬಾಣಂತಿಯರು ಸತ್ತಿದ್ದಾರೆ. ಅವರ ಪೋಸ್ಟ್ ಮಾರ್ಟ್ಂ ವರದಿ ಎಲ್ಲಿ ಎಂದು ಪ್ರಶ್ನಿಸಿದರು. ಬಡ ಜನರಿಗೆ ವಿಶ್ವಾಸ ತುಂಬಲು ಅಸಗಿರುವ ತಪ್ಪನ್ನು ಸರಿಯಾದ ಕ್ರಮದಲ್ಲಿ ಪತ್ತೆಹಚ್ಚಿ ಕ್ರಮ ಜರುಗಿಸಬೇಕು. ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಆಗಬೇಕು. ಸತ್ತಿರುವ ಬಾಣಂತಿಯರ ಕೂಸುಗಳಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ದಿನೇಶ್ ಗುಂಡುರಾವ್ ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿ, ಬಾಣಂತಿಯರ ಸಾವು ಸಂಭವಿಸಿದ ತಕ್ಷಣ ತನಿಖಾ ತಂಡವನ್ನು ಕಳಿಸಿದ್ದೆ. ಅವರು ವೈದ್ಯರ ಕರ್ತವ್ಯ ಲೋಪದಿಂದ ಅಲ್ಲ, ಆದರೆ ಪ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಈ ಪ್ರಕರಣದಲ್ಲಿ ಯಾವುದನ್ನು ಮುಚ್ಚಿ ಹಾಕಲ್ಲ ರಾಜ್ಯದಲ್ಲಿನ 327 ಬಾಣಂತಿಯರ ಸಾವಿನ ವರದಿ ಕೇಳಿದೆ. ಬಳ್ಳಾರಿ ಪ್ರಕರಣವನ್ನು ಇನ್ನೂ ಉನ್ನತ ಮಟ್ಟದ ತನಿಖೆಯನ್ನು ನಡೆಸಲಿದೆ. ಅಲ್ಲದೆ ಪ್ರಾಸ್ಯುಕೇಷನ್ ಮಾಡಿಸಲಿದೆಂದು ಹೇಳಿದರು. .
ನಿಮ್ಮ ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಸರಿಯಾದ ಕ್ರಮ, ಬಾಣಂತಿಯರ ಸಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸದನದಲ್ಲೂ ಚರ್ಚೆ ಮಾಡಲಿದೆ. ಪರಿಹಾರದ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಆಗಲಿದೆ ನೀವು ಸತ್ಯಾಗ್ರಹ ಹಿಂದಕ್ಕೆ ಪಡೆಯಬೇಕೆಂದು ಶ್ರೀರಾಮುಲು ಅವರಿಗೆ ಮನವಿ ಮಾಡಿದರು. ಇದರಿಂದಾಗಿ ಶ್ರೀರಾಮುಲು ತಮ್ಮ ಸತ್ಯಾಗ್ರಹ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ್, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ , ಬಿಜೆಪಿ ಜಿಲ್ಕಾ ಅಧ್ಯಕ್ಷ ಅನಿಲ್ ನಾಯ್ಡು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles