ಡಿಜೆ ಬ್ಯಾನ್ ಮಾಡಲು ಸರ್ಕಾರ ಚಿಂತನೆ

ಬೆಳಗಾಯಿತು ವಾರ್ತೆ | www.belagayithu.in
ಬೆಂಗಳೂರು: ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಬ್ಬರದ ಸಂಗೀತ ಪ್ರಸಾರಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ, ಡಿಜೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌. ತಂಗಡಗಿ ಅವರು ವಿಧಾನಸಭೆಗೆ ಬುಧವಾರ ಈ ವಿಚಾರ ತಿಳಿಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ನಿಯಮಿತವಾಗಿ ‘ಸಹ್ಯಾದ್ರಿ ಉತ್ಸವ’ವನ್ನು ಆಯೋಜಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಸದನದಲ್ಲಿ ಕೋರಿದರು. ಇದೇ ವೇಳೆ, ಬಿಜೆಪಿಯ ಜನಾರ್ಧನ ರೆಡ್ಡಿ ಅವರು ಕೊಪ್ಪಳದಲ್ಲಿ ಆನೆಗುಂದಿ ಉತ್ಸವವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಇದರಿಂದಾಗಿ, ಡಿಜೆ ವಿಚಾರ ಚರ್ಚೆಯಾಯಿತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles