ಬಳ್ಳಾರಿ: ಪ್ಯಾಕೇಜ್ ಟೆಂಡರ್ ಗುತ್ತಿಗೆ ಆದೇಶ ಹಿಂಪಡೆದು ಈ ಹಿಂದಿನಂತೆ ಐದು ಲಕ್ಷದ ವರೆಗೆ ತುಂಡು ಗುತ್ತಿಗೆ ನೀಡುವಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ ಅವರು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು
ಪ್ಯಾಕೇಜ್ ಟೆಂಡರ್ ಗುತ್ತಿಗೆ ಹಿಂಪಡೆದು ಐದು ಲಕ್ಷದ ವರೆಗೆ ತುಂಡು ಗುತ್ತಿಗೆ ನೀಡಲಾಗುತ್ತಿತ್ತು ಇದೀಗ ತುಂಡು ಗುತ್ತಿಗೆ ಮೇಲೆ ಬಳ್ಳಾರಿ ವಿಜಯನಗರ ಸೇರಿ ಎರಡು ಜಿಲ್ಲೆಗಳಲ್ಲಿ ಆರು ಸಾವಿರ ಕುಟುಂಬಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ತುಂಡು ಗುತ್ತಿಗೆ ನೀಡುವಂತೆ ಸರ್ಕಾರದ ಆದೇಶ ಇದ್ದರು ಅಧಿಕಾರಿಗಳು ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ರಾಜ್ಯಾದ್ಯಂತ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾಮಗಾರಿ ಗುತ್ತಿಗೆ ಕಾಮಗಾರಿ ಹಮ್ಮಿಕೊಳ್ಳಲಾಗುವುದಿಲ್ಲ ಎಂದರು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾವೀದ್ ಅಹಮ್ಮದ್ ವೀರೇಶ್ ಕುಮಾರ್, ಸುಧಾಕರ್ ಸೇರಿದಂತೆ ಮತ್ತಿತರ ಇದ್ದರು.