ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ವತಿಯಿಂದ ನಗರದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುವಾರ ಬೃಹತ್ ಕೊಡೆಗಳನ್ನು ವಿತರಿಸಲಾಯಿತು.
ನಗರದ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆಯ ಎರಡೂ ಬದಿ ಹಾಗೂ ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿನ ವ್ಯಾಪಾರಿಗಳಿಗೆ ಕೊಡೆಗಳನ್ನು ಹಂಚಿಕೆ ಮಾಡಲಾಯಿತು. ಕಳೆದ ಮೂರು ದಿನಗಳಿಂದ ನಿರಂತರವಾಗಿ ಕೊಡೆಗಳ ವಿತರಣೆ ಕಾರ್ಯ ನಡೆಯುತ್ತಿದ್ದು, ಗುರುವಾರ ಮೂರನೇ ದಿನವೂ ಕಾರ್ಯಕ್ರಮ ಮುಂದುವರಿಯಿತು.
ಬೀದಿ ಬದಿ ವ್ಯಾಪಾರಸ್ಥರು ಶಾಸಕ ನಾರಾ ಭರತ್ ರೆಡ್ಡಿ ಅವರ ಈ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದು, “ಕೊಡೆಗಳ ನೆರವಿನಿಂದ ತೀವ್ರ ಬಿಸಿಲಿನಿಂದ ರಕ್ಷಣೆ ದೊರೆತಿದ್ದು, ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಿದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಥಿಯೇಟರ್ ಶಿವು, ದುರ್ಗಾಮೋಹನ್, ಟಿಲ್ಲು, ಬೆಣಕಲ್ ರಘು, ಕಪ್ಪೆ ಶಿವು, ಸೆವೆನ್ ಹಿಲ್ಸ್ ರಘು, ಗೌತಮ್, ಧರ್ಮಶ್ರೀ, ಭಾಸ್ಕರ್ ರೆಡ್ಡಿ, ಟಿ.ಹೆಚ್. ಸೀನಾ, ರಘು, ಬುಜ್ಜಿ, ಹನಮಂತು, ರಸೂಲ್, ಪ್ರದೀಪ್, ಶ್ರೀಕಾಂತ್, ಸುನೀಲ್, ಶಶಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಕೊಡೆಗಳ ವಿತರಣೆಯಲ್ಲಿ ಭಾಗವಹಿಸಿದರು.





