27 C
Bellary
Thursday, June 20, 2024

Localpin

spot_img

ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ನೀಡಲು ಆಗ್ರಹ

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ಸೇರಿದದಂತೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಶೌಚಾಲಯಗಳು ಇಲ್ಲ ಹಾಗೂ ಸುಮಾರು 250ಕ್ಕೂ ಹೆಚ್ಚು ಬಡ ಕುಟುಂಬಗಳು ನಿವೇಶನ ಮತ್ತು ವಸತಿ ಇಲ್ಲದೆ ಲಭ್ಯವಿರುವ ಚಿಕ್ಕಗುಡೀಸಲಲ್ಲಿ ಮೂರು ನಾಲ್ಕು ಕುಟುಂಬಗಳು ಒತ್ತಡದ ಸಂಕಷ್ಟದಲ್ಲಿ ವಾಸಿಸುತ್ತಿದ್ದು, ಮೂಲಭೂತ ಸೌಲಭ್ಯಗಳು ಮರೆಮಾಚಿವೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಷನ್ ನ ಜಿಲ್ಲಾ ಅಧ್ಯಕ್ಷ ಯು.ಎರ್ರಿಸ್ವಾಮಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಪತ್ರಿಕಾ ಭವನದಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊಳಗಲ್ಲು ಗ್ರಾಮದ ವಾರ್ಡ್ ಗಳಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದಿಲ್ಲ. ಸಾರ್ಜನಿಕ ಶೌಚಾಲಯಗಳಿಲ್ಲ. ಗ್ರಾಮದಲ್ಲಿ ಸಾಕಷ್ಟು ವಿದ್ಯವಂತ ಯವಕರಿದ್ದು ನಿತ್ಯದ ವರ್ತಮಾನ ತಿಳಿಯಲು ಗ್ರಂಥಾಲಯ ಇದ್ದು, ಇಲ್ಲದಂತಾಗಿದೆ. ಇಂತಹ ಅನೇಕ ಮೂಲಭೂತ ಸೌಕರ್ಯಗಳಿಂದ ಗ್ರಾಮದ ಜನರು ವಂಚಿತವಾಗಿದ್ದರು, ನಮ್ಮ ಶಾಸಕ ಬಿ.ನಾಗೇಂದ್ರ ಹಾಗೂ ಸಂಸದ ವೈ ದೇವೇಂದ್ರಪ್ಪನವರು ಒಂದು ಬಾರಿಯು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಆರೋಪ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಮತ ಕೇಳಲು ಬರುವ ರಾಜಕೀಯ ನಾಯಕರು, ಗೆದ್ದು ಸಂಸದ, ಶಾಸಕರಾದ ಮೇಲೆ ಗ್ರಾಮಗಳ ಕಡೆಗೆ ತಿರುಗಿ ನೋಡುವ ಕನಿಷ್ಠ ಪ್ರಯತ್ನ ಮಾಡದಿರುವುದು ಹಾಗೂ ಜನರ ಕುಂದುಕೊರತೆ ಆಲಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲು ಸಾಕಷ್ಟು ಭೂಮಿ, ಲಭ್ಯವಿದ್ದು ಸರ್ವೆ ನಂಬರ್ 557 ರಲ್ಲಿ ಸುಮಾರು 296ಕ್ಕೂ ಹೆಚ್ಚು ಜಮೀನು ಇದೆ. ಈ ಭೂಮಿ ಕುಡಿಯುವ ನೀರಿನ ಕೆರೆ ನಿರ್ಮಿಸಲು ಕಾಯ್ದಿರಿಸಲಾಗಿದ್ದು ಹಲವು ವರ್ಷಗಳಿಂದ ಕುಡಿಯುವ ನೀರಿನ ಕೆರೆ ನಿರ್ಮಿಸುವ ಚರ್ಚೆಗಳು ನಡೆದಿವೆ. ಮಣ್ಣು ಪರೀಕ್ಷೆ ನಡಿದಿದೆ. ವರದಿಯೂ ಬಂದಿದೆ. ಕೆರೆಗೆ ಕಾಯ್ದಿರಿಸಿದ ಭುಮಿಯ ಪಕ್ಕದಲ್ಲಿ ತುಂಗಬದ್ರಾ ಜಲಾಶಯದ ಎಚ್ ಎಲ್ ಸಿ ಮೇನ್ ಕಾಲುವೆ ಇದೆ.
ಇಷ್ಟಿದ್ದರೂ ಕೂಡ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳು ಕೇವಲ ಹೆಸರಿಗಷ್ಟೇ ಅಲ್ಪಸ್ವಲ್ಪ ಕೆರೆ ನಿರ್ಮಾಣ ಮಾಡಿ ಕೈತೊಳೆದು ಕೊಂಡಿರುವುದು ಜನರ ತಾಳ್ಮೆಯನ್ನು ಪರೀಕ್ಷಿಸುವಂತಾಗಿದೆ. ಅರೆಬರೆ ಕಾಮಗಾರಿಯಿಂದಾಗಿ ಸುಗುವ ಅರೆಬರೆ ನೀರನ್ನೂ ಗ್ರಾಮ ಪಂಚಾಯತ್ ಆಡಳಿತ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿದಿನಗಳು ಸಂಪೂರ್ಣ ವಿಫಲರಾಗಿದ್ದರೆ,
ಸ್ವಚ್ಛತೆ ಇಲ್ಲದೆ ಇರುವ ನೀರನ್ನು 15 ದಿನಕ್ಕೊಮ್ಮೆ 20 ದಿನಕ್ಕೊಮ್ಮೆ ಕೇಲ ವಾರ್ಡ್ ಗಳಿಗಳಿಗೆ ಸರಬರಾಜು ಮಾಡುತ್ತಾರೆ. ಇದರ ಸೇವನೆಯಿಂದ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದು ಬಿಟ್ಟರೆ ಇಲ್ಲಿನ ಜನರಿಗೆ ಬೇರೆ ದಾರಿ ಇಲ್ಲ. ಅರೆಬರೆ ಕಾಮಗಾರಿಯಿಂದ ಸರಬರಾಜುಗೊಳ್ಳುವ ಕರೆಯ ನೀರು 1 ವಾರ್ಡ್ ಗೇ ಸಾಲುತ್ತಿಲ್ಲ. ಮುಂದೆ ಕಡು ಬೇಸಿಗೆ ಕಾಲ ಎದುರಾದರೆ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಗ್ರಾಮದಲ್ಲಿ ಲಭ್ಯವಿರುವ ಬೋರು ವೆಲ್ ನೀರು ಬತ್ತುವಂತಾಗಿವೆ. ನೀರಿನ ಕೊರತೆಯಿಂದಾಗಿ ದಿನ ಬಳಕೆ ನೀರು 3 ಇಲ್ಲವೆ 6ದಿನಕ್ಕೆ ಒಂದು ಸಲ ವಾರ್ಡುಗಳಿಗೆ ನೀರು ಪೂರೈಸುವಂತ ಪರಿಸ್ಥಿತಿ ಇದೆ.
ಆದ್ದರಿಂದ ಜಿಲ್ಲಾ ಉಸ್ತವಾರಿ ಸಚಿವರು ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಅಭಾವ ನೀಗಿಸಲು ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತವಾದ ಕ್ರಮವಹಿಸಬೇಕೆಂದು ಆಗ್ರಹಿಸುತ್ತೇವೆ.
ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ಧರಣೆ ಮುಂದುವರೆದೆ ಕೊಳಗಲ್ಲು ಗ್ರಾಮದ ಎಲ್ಲಾ ರೈತರು, ಮಹಿಳೆಯರು, ಯುವ ಜನರು ಸೇರಿ ಡಿವೈಎಫ್‌ಐ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಚೆಲೋ ಹೋರಾಟ ಮತ್ತು ಅನಿರ್ದಿಷ್ಟಾವಾದಿ ಸತ್ಯಾಗ್ರಹ, ಧರಣಿ ಮತ್ತಿತರೆ ಹೋರಾಟವನ್ನು ನಡೆಸುವುದು ಅನಿವಾರ್ಯವಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹೆಚ್ ಎರ್ರಿಸ್ವಾಮಿ, ಬಿ.ಪಿ.ನವಿನ್, ಮಸ್ತಾನ್ ಸಾಬ್, ಎಚ್ ರಮೇಶ್,ಬೈಲು ಹನುಮಪ್ಪ, ಕೆ. ಶಿವಾನಂದ, ಯು. ಲಕ್ಷ್ಮಣ, ಎ.ತಿಪ್ಪೇರುದ್ರ, ಯು. ವೀರೇಶ್, ಎಚ್. ಕುಮಾರ್, ಜೆ.ಎನ್.ಎರ್ರಿಸ್ವಾಮಿ, ವೀರೇಶ್ ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles