ಹೆಣ್ಣು ಮಗು ಜನಿಸಿದ ಖುಷಿಗೆ 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ

ಬೆಳಗಾಯಿತು ವಾರ್ತೆ |www.belagayithu.in
ಹೆಣ್ಣು ಮಗು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ ಎಂದು ಹೇಳುತ್ತಾರೆ. ಹೀಗಿದ್ದರೂ ಕೂಡಾ ಇಂದಿಗೂ ಅದೆಷ್ಟೋ ಜನರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ, ಈ ಅನಿಷ್ಟ ಯಾಕಾದ್ರೂ ನಮ್ಮ ಮನೆಯಲ್ಲಿ ಜನಿಸಿತೋ ಎಂದು ಮುಖ ಸಿಂಡರಿಸಿ ಕೊಳ್ಳುತ್ತಾರೆ.  ಇಂತಹ ಜನಗಳ   ಮಧ್ಯದಲ್ಲಿ ಇಲ್ಲೊಬ್ಬ ತಂದೆ ತನಗೆ ಹೆಣ್ಣು ಮಗುವಾಯಿತು ಎಂಬ ಖುಷಿಯಲ್ಲಿ ತನ್ನ ದುಬಾರಿ ಬೆಲೆಯ  ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಗುಲಾಬಿ ಬಣ್ಣದಲ್ಲಿ ಮೊಡಿಫೈ ಮಾಡಿ ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಗುಜರಾತಿನ ಸೂರತ್ ನಗರದಲ್ಲಿ ನಡೆದಿದ್ದು, ಇಲ್ಲಿನ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಕೋಟಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಅಲ್ಲಿ ಗುಲಾಬಿ ಬಣ್ಣದಲ್ಲಿ ಅಲಂಕರಿಸಿ, ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. @suratupdatesofficial ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಸೂರತ್ ನಲ್ಲಿ ತಂದೆಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಐಷಾರಾಮಿ ಕಾರನ್ನು ಗುಲಾಬಿ ಬಣ್ಣದಿಂದ ಅಲಂಕರಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles