ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಇಂದಿನ ದಿನಗಳಲ್ಲಿ ಜಾತಿ, ಮತ, ಪಂತ ಧರ್ಮ ಎಂಬೆಲ್ಲಾ ಕೇಳಿ ಬರುತ್ತಿದೆ. ಆದರೆ, ಯಾವುದೇ ಧರ್ಮವಾಗಲಿ ಅವರದ್ದೆಯಾದ ಒಂದು ಕುರುಹು ಇರುತ್ತದೆ. ಅದನ್ನ ಆಯಾ ಧರ್ಮದವರು ದೇವರು ಎಂದು ನಂಬುತ್ತಾರೆ ಮತ್ತು ಆರಾಧಿಸುತ್ತಾರೆ ಎಂದು ಕಲ್ಯಾಣ ಸಂಸ್ಥಾನ ಮಠದ ಕಲ್ಯಾಣ ಸ್ವಾಮಿಜಿ ಅವರು ಹೇಳಿದರು.
ನಗರದ ಸಂಗಮ್ ವೃತ್ತದಲ್ಲಿರುವ ಮಾಜಿ ಮೇಯರ್ ಪಾಲಿಕೆ ಸದಸ್ಯ, ವಿಪಕ್ಷ ನಾಯಕ ಸಿ. ಇಬ್ರಾಹಿಂ ಬಾಬು ಅವರ ಕಚೇರಿಯಲ್ಲಿ ಕುರಾನ್‌ನ ಧ್ವನಿ ಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಾವೆಲ್ಲರೂ ಒಂದೆ. ಜಾತಿ, ಧರ್ಮ ಇವುಗಳನ್ನು ನಾವು ಮೊದಲು ಪಕ್ಕದಲ್ಲಿ ಇಟ್ಟು ಮೊದಲು ಮಾನವರು ಎಂಬುವುದನ್ನು ಮನಗಾಣಬೇಕು ಎಂದು ಅವರು ಹೇಳಿದರು.
ನಂತರ ಮಾತನಾಡಿದ ಸಿ ಇಬ್ರಾಹಿಂ ಅವರು, ನಾವು ನಮ್ಮ ಸಮುದಾಯ ಕುರಾನ್‌ನ್ನು ನಂಬಿದ್ದಾರೆ. ಕುರಾನ ನಮಗೆ ದೇವರು. ಹಾಗಾಗಿ ಇಸ್ಲಾಮಿಕ್‌ನಲ್ಲಿ ಇರುವ ಕುರಾನನ್ನು ಅರಬ್ಬಿ -ಕನ್ನಡ, ಅರಬ್ಬಿ – ತೆಳುಗು, ಅರಬ್ಬಿ -ಇಂಗ್ಲೀಷ್, ಅರಬ್ಬಿ –ಉರ್ದು ಭಾಷೆಗಳ ಅವತರಣಿಕೆ ಹೊಂದಿದ್ದು, ಈ ನಾಲ್ಕೂ ಭಾಷೆಗಳ ಜ್ಞಾನವುಳ್ಳವರು ಇಡೀ ಕುರಾನ್ ಅನ್ನು ತಮ್ಮ ಮಾತೃ ಭಾಷೆಯಲ್ಲಿ ಕೇಳಿಸಿಕೊಂಡು ಅರ್ಥೈಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಾದರ್ ಐವಾನ್ ಪಿಂಟೋ, ಗುಲಾಮ ಮೊಹಮ್ಮದ್ ಸಿದ್ದಿಕಿ ಖಾಜಿ, ಸ್ವಾಮಿ ಕೃಷ್ಣಚಂದ್ರ ದಾಸ್ ಸೇರಿದಂತೆ ಅನೇಕರು ಹಾಜರಿದ್ದರು.
ಪವಿತ್ರ ಕುರಾನ್‌ನ ಆಡಿಯೋ ಪೆನ್ ಡ್ರೈವ್ ಗಾಗಿ ರಾಜೇಶ್ ವರ್ಮಾ ಅವರನ್ನು ಸಂಪರ್ಕಿಸಬಹುದು – 6363569457





