ಬೆಳಗಾಯಿತು ವಾರ್ತೆ
ಬಳ್ಳಾರಿ: ಇಂದು ಇಡೀ ದೇಶದಲ್ಲೆ ಸಂಭ್ರಮ ಮನೆ ಮಾಡಿದ್ದು, ಅಯೋದ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಟಾಪನೆ ಪ್ರಯುಕ್ತ ಇಂದು ಸಂಜೆ ನಗರದ ಎಂಎಂಟಿಸಿ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಗರದ ೨೨ನೇ ವಾರ್ಡಿನ ಪಾಲಿಕೆ ಸದಸ್ಯ ಡಾ. ಕೆ. ಎಸ್. ಅಶೋಕ್ ಕುಮಾರ್ ಅವರು ಆಯೋಜನೆ ಮಾಡಿದ್ದಾರೆ.
ಜೊತೆಗೆ ೨೨ನೇ ವಾರ್ಡಿನ ಹೆಣ್ಣು ಮಕ್ಕಳಿಗೆ ಚುಕ್ಕಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹಯಮಾನ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕಿ ಪ್ರಕೃತಿ ರೆಡ್ಡಿ ಇವರಿಂದ ರಾಮನ ಭಕ್ತಿ ಗೀತೆ ಕಾರ್ಯಕ್ರಮ ಇದೆ. ಜೋತೆಗೆ ಸೂರ್ಯ ಕಲಾ ಟ್ರಸ್ಟ್ ನ ಕೆ. ಸಿ ಸುಂಕಣ್ಣ (ಅಭಿಷೇಕ್) ಇವರಿಂದ ನೃತ್ಯ ವನ್ನು ಆಯೋಜನೆ ಮಾಡಲಾಗಿ ಎಂದು ಅವರು ತಿಳಿಸಿದ್ದಾರೆ.