ಬೆಳಗಾಯಿತು ವಾರ್ತೆ | Www.belagayithu.in
ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಪಟ್ಟಣದ 20ನೇ ವಾರ್ಡಿನ ದೇವಿನಗರ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ಮುಂಜಾನೆ ಕಾರೊಂದು ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನಿಟ್ಟೂರಿನ ಪ್ರಸಾದ್ ರಾವ್ (75) ಸಿರುಗುಪ್ಪ ನಿವಾಸಿಗಳಾದ ವಿಜಯ (70) ಹಾಗೂ ಸಂಧ್ಯಾ (35) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನಿಟ್ಟೂರು ಗ್ರಾಮದ ಪದ್ಮ (70) ಹಾಗೂ ಸಿರುಗುಪ್ಪದ ಬ್ರಹೇಶ್ವರರಾವ್ (45) ಇವರನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ನಿಟ್ಟೂರು ಗ್ರಾಮದವರಾದ, ಸದ್ಯ ಸಿರುಗುಪ್ಪ ನಗರದಲ್ಲಿ ವಾಸವಾಗಿರುವ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ಸು ಬರುವಾಗ ದೇವಿನಗರದ ಬಳಿ ಅಪಘಾತವಾಗಿದೆ.ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ, ಈ ಅವಘಢ ಸಂಭವಿಸಿದೆ ಎಂದು ಹೇಳಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





