ಬೆಳಗಾಯಿತು ವಾರ್ತೆ | Www.belagayithu.in
ಕುರುಗೋಡು: ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಪಟ್ಟಣ ಪಂ ಮಾಜಿ ಅಧ್ಯಕ್ಷರು ವಿ. ರಾಜಶೇಖರ ಹೇಳಿದರು.
ತಾಲೂಕು ಸಮೀಪದ ಕುಡತಿನಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ (ರಕ್ತ ಸುರಕ್ಷತೆ), ಬಳ್ಳಾರಿ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ, ಬಳ್ಳಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಡಿತಿನಿ, ವಿ. ರಾಜಶೇಖರ್ ಹಾಗೂ ಜಿ.ಎಸ್.ವಿ. ಬಾಬು ಸದಸ್ಯರು ಪಟ್ಟಣ ಪಂಚಾಯಿತಿ ಮತ್ತು ಗ್ರೀನ್ ಫೌಂಡೇಷನ್ ಇವರ ನೇತೃತ್ವದ ಶಿಬಿರದಲ್ಲಿ ಮಾತನಾಡಿದರು.
ಕುಡತಿನಿ ಸುತ್ತಮುತ್ತಲಿನಲ್ಲಿ ಐವತ್ತಕ್ಕೂ ಹೆಚ್ಚು ಕಾರ್ಖಾನೆಗಳು ಇದ್ದು ದಿನ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ವಿಷ ಅನಿಲ ಹೊರಸೂಸುತ್ತವೆ ಇದರ ಪರಿಣಾಮವಾಗಿ ಇಲ್ಲಿ ವಾಸಿಸುವ ಜನರಿಗೆ ಉಸಿರಾಟ ಸಂಬಂಧಿತ ಹಾಗೂ ರಕ್ತ ಕ್ಯಾನ್ಸರ್ ನಂತಹ ರೋಗಗಳು ಹೆಚ್ಚು ತಿದ್ದು ಇಲ್ಲಿ ರೋಗಿಗಳಿಗೆ ರಕ್ತದ ಅಭಾವವಾಗಬಾರದೆಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಈ ರಕ್ತದಾನ ಶಿಬಿರದಲ್ಲಿ ಮಧ್ಯನದ ವೇಳೆಗೆ 150 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಪಟ್ಟಣ ಪಂ ಮಾಜಿ ಅಧ್ಯಕ್ಷರು ವಿ. ರಾಜಶೇಖರ, ಉಪಾಧ್ಯಕ್ಷ ಪಂಪಾಪತಿ, ಸದಸ್ಯ ವೆಂಕಟರಮಣ ಬಾಬು, ದೊಡ್ದ ಬಸಪ್ಪ, ದೊಡ್ಡಪ್ಪ, ಎ. ರಾಜಪ್ಪ, ವಿನೋದ್ ಕುಮಾರ್, ಜಟ್ಟಂಗಿ ಬಸವರಾಜ, ರಮೇಶ, ಶಿವು, ಎ. ಸಾದಕಲಿ, ಪ್ರಶಾಂತ್, ಜಾಕೀರ್ ಮಹಾಲಿಂಗ, ಗಂಗಾಧರ ಇತರರು ಉಪಸ್ಥಿತರಿದ್ದರು.