ಬೆಳಗಾಯಿತು ವಾರ್ತೆ
ಬಳ್ಳಾರಿ: ಸಂಡೂರು ವಿಧಾನಸಭೆ ಚುನಾವಣೆ ಮತದಾನ ನ. 13ರಂದು ನಡೆದಿದ್ದು, ಇಂದು ಮತ ಏಣಿಕೆ ಪ್ರಾರಂಭವಾಗಲಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮತ ಏಣಿಕೆ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದು, ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ. ಎಲ್ಲಾ ಬಿಜೆಪಿ ನಾಯಕರು ಸೇರಿ ಈ ಚುನಾವಣೆಯನ್ನ ಒಗ್ಗಟ್ಟಿನಿಂದ ಎದುರಿಸಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಮತ ಪಡೆಯುವ ತಂತ್ರ ನಡೆಸಿದೆ. ಅವರ ಈ ತಂತ್ರ ಫಲ ನೀಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಮೂರು ದಿನ ವಾಸ್ತವ್ಯ ಹೂಡಿ ಮತ ಪ್ರಚಾರ ಮಾಡಿದ್ರು ಪ್ರಯೋಜನವಿಲ್ಲ ಎಂದರು.
14 ವರ್ಷಗಳ ಬಳಿಕ ಜನಾರ್ಧನರೆಡ್ಡಿ ಜಿಲ್ಲೆಗೆ ಬಂದಿರುವುದು ನಮಗೆ ಅನುಕೂಲ ಆಗಿದೆ. ಜನಾರ್ಧನರೆಡ್ಡಿ , ಶ್ರೀರಾಮುಲು, ಕೆಎಸ್ ದಿವಾಕರ್ ಸೇರಿ ರಾಜ್ಯ ನಾಯಕರು ಸಾಕಷ್ಟು ಪ್ರಚಾರ ಮಾಡಿದ್ದು,
ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದೆ ಗೆಲ್ಲಲಿದೆ ಅನ್ನೋ ವಿಶ್ವಾಸ ಇದೆ ಎಂದರು.





