ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ನಗರದ ಡಿ.ಎ.ಆರ್ ಮೈದಾನದಲ್ಲಿ ಎಂ.ಓ.ಬಿ ಆಸಾಮಿಗಳ ಪರೇಡ್ ಆಯೋಜಿಸಲಾಯಿತು.
ಬಳ್ಳಾರಿ ನಗರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಬ್ರೂಸ್‌ಪೇಟೆ, ಗಾಂಧಿನಗರ, ಕೌಲ್‌ಬಜಾರ್ ಹಾಗೂ ಎ.ಪಿ.ಎಂ.ಸಿ ಪೊಲೀಸ್ ಠಾಣೆಗಳ ಸರಹದ್ದಿನ ಸುಮಾರು 170 ಮಂದಿ ಎಂ.ಓ.ಬಿ ಶೀಟರ್ ಗಳು ಪರೇಡ್‌ಗೆ ಹಾಜರಾಗಿದ್ದರು.
ಈ ವೇಳೆ ಎಂ.ಓ.ಬಿ ಶೀಟರ್ ಗಳ ಚಟುವಟಿಕೆಗಳು, ಜೀವನ ನಿರ್ವಹಣೆ ಹಾಗೂ ಹಾಲಿ ವಿಳಾಸಗಳ ಕುರಿತು ಮಾಹಿತಿ ಸಂಗ್ರಹಿಸಿ, ಅವರ ಮೇಲೆ ನಿಗಾವಹಿಸುವ ಕ್ರಮ ಕೈಗೊಳ್ಳಲಾಯಿತು.
ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದೇ ಉತ್ತಮ ನಾಗರಿಕರಾಗಿ ಜೀವನ ನಡೆಸುವಂತೆ ಸೂಚನೆ ನೀಡಲಾಯಿತು. ಒಂದು ವೇಳೆ ಪುನಃ ಅಪರಾಧಿಕ ಕೃತ್ಯಗಳಲ್ಲಿ ತೊಡಗಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಮಾಹಿತಿ ನೀಡಿದ್ದಾರೆ.





