ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಮೂನ್ ವಾಕರಸ್ ಸಾಂಸ್ಕೃತಿಕ ಕಲಾಸಂಘದ 9ನೇ ವರ್ಷದ ವಾರ್ಷಿಕೋತ್ಸವದಲ್ಲಿ ಚಿಕ್ಕ ಮಕ್ಕಳಿಗೆ ನಗರದ ರೇಣುಕಾ ಬೇಕರಿಯಲ್ಲಿ ಚಾಕೋಫೈ, ವೇಜ್‌ಪಪ್ಪು, ಜೂವ್ಸ್ ತರಿಸಲಾಗಿತ್ತು. ಆದರೆ ಚಾಕೋಫೈ ಚಾಕಲೇಟ್‌ನಲ್ಲಿ ಹುಳುಗಳು ಕಂಡುಬಂದಿದ್ದರಿಂದ ಯಾರು ಸಹ ತಿನ್ನಬೇಡಿ ಎಂದು ತಿಳಿಸಿದ್ದಾರೆ.
ಚಾಕಲೇಟ್ ತಿಂದ ಕೆಲವು ಮಕ್ಕಳು ಮನೆಗೆ ತೆರೆಳಿದ ನಂತರ ವಾಂತಿ,ಬೇದಿ, ಹೊಟ್ಟೆ ನೋವಿನಿಂದ ಬಳಲಿದ್ದಾರೆ.ಪೋಷಕರು ರೇಣುಕಾ ಬೇಕರಿಗೆ ಭೇಟಿ ನೀಡಿ ಕೇಳಿದರೆ ನಮಗೂ ಈ ವಿಷಯಕ್ಕೆ ಯಾವುದೇ ರೀತಿ ಸಂಬಂಧವಿಲ್ಲ ನೀವೂ ಚಾಕಲೇಟ್ ಕಂಪನಿಯವರನ್ನು ಕೇಳಿ ಎಂದು ಬೇಜಾವಾಬ್ದಾರಿ ಹೇಳಿಕೆಯನ್ನು ನೀಡಿದ್ದರಿಂದ ಬುಧವಾರದಂದು ಜೈ ಭೀಮ್ ಆರ್ಮಿ ಸಂಘದಿಂದ ಪ್ರತಿಭಟನೆ ಮಾಡಲಾಯಿತು.





