29.8 C
Bellary
Thursday, April 24, 2025

Localpin

spot_img

ತುಂಗಭದ್ರಾ ನದಿ ದಡದಲ್ಲಿ ಅಲ್ಯುಮಿನಿಯಂ ಲೋಹ ಪತ್ತೆ 

ಬೆಳಗಾಯಿತು ವಾರ್ತೆ |www.belagayithu.

ಬೆಂಗಳೂರು, ಮಾರ್ಚ್. 01: ಕರ್ನಾಟದಕ ಎಲ್ಲಾ ನದಿಗಳ ಎರೆಡೂ ದಡಗಳ 3, 5 ಅಥವಾ 10 ಕಿಲೋ ಮೀಟರ್ ವ್ಯಾಪ್ತಿಯನ್ನು `ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಣೆ ಮಾಡಿ ನದಿ ನೀರಿನ ಮತ್ತು ಮಣ್ಣಿನ ಶುದ್ಧತೆಯನ್ನು ಕಾಪಾಡಲು ಸರ್ಕಾರ ಪ್ರಥಮ ಆದ್ಯತೆ ನೀಡಬೇಕು ಎಂದು ಬಳ್ಳಾರಿ – ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.

ಮಲಿನಗೊಳ್ಳುತ್ತಿರುವ ತುಂಗಭಧ್ರಾ ನದಿಯ ನೀರಿನ ಶುದ್ಧತೆಯನ್ನು ಕಾಪಾಡುವ ತುರ್ತು ಅಗತ್ಯವಿದ್ದು, ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸದನದಲ್ಲಿ ಪ್ರಶ್ನೆ ಕೇಳಿ, ನಡೆದ ಚರ್ಚೆಯಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಉತ್ತರಿಸಿದರು. ತುಂಗಭದ್ರಾ ನದಿಯ ನೀರು ಮತ್ತು ನದಿಯ ದಂಡೆಯ ಮಣ್ಣಿನಲ್ಲಿ ನಡೆಸಿದ ಮಾದರಿ ವಿಶ್ಲೇಷಣಾ ವರದಿಯಲ್ಲಿ ಅಲ್ಯುಮಿನಿಯಂ ಲೋಹ
ಇರುವುದು ಪತ್ತೆಯಾಗಿದೆ.

ರಾಷ್ಟ್ರೀಯ ನದಿ ನೀರು ಮಾಪನದ ಕಾರ್ಯಕ್ರಮದ ಅಡಿಯಲ್ಲಿ ತುಂಗಭದ್ರ ನದಿ, ಭದ್ರಾ ನದಿ ಹಾಗೂ ತುಂಗಭದ್ರಾ ನದಿ ವ್ಯಾಪ್ತಿಯ 18 ಸ್ಥಳಗಳಲ್ಲಿ ಮಣ್ಣಿನ ಮತ್ತು ನೀರಿನ ಮಾದರಿಯಗಳನ್ನು ಸಂಗ್ರಹ ಮಾಡಿ, ವಿಶ್ಲೇಷಣೆಗೆ ಮಾಡಿದಾಗ, ತಾಮ್ರ, ಸೀಸ, ಜಿಂಕ್, ನಿಕ್ಕಲ್, ಕಬ್ಬಿಣ, ಮ್ಯಾಂಗನೀಸ್, ಕ್ಯಾಡ್ಮಿಯಂ, ಕ್ರೋಮಿಯಂ ಹಾಗೂ ಅಲ್ಯುಮಿನಿಯಂ ಲೋಹಗಳು ಇರುವುದು ಸಾಬೀತಾಗಿದೆ. ವಿಶ್ಲೇಷಣೆಯಲ್ಲಿ ಬಯಲಾಗಿರುವ ವರದಿಯು ಆತಂಕಕಾರಿಯಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದರು.  

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತ ವಿಜ್ಞಾನಿಗಳ ಸಹಯೋಗದಲ್ಲಿ ನೀರಿನ ಗುಣಮಟ್ಟ ಮತ್ತು ಸುಧಾರಣೆಗಾಗಿ ಕಾರ್ಯಾಚರಣೆಯ ಮೌಲ್ಯಮಾಪನವನ್ನು ನಡೆಸಲಾಗುತ್ತಿದೆ. ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕುಡಿಯುವ ನೀರು ಸಂಸ್ಕರಣ ಘಟಕದಲ್ಲಿ ಬಳಸುವ ರಾಸಾಯನಿಕಗಳ ಪೈಕಿ, ಅಲ್ಯುಮಿನಿಯಂ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಳ್ಳಾರಿಯ ಜನರು ಪ್ರಸ್ತುತ ಕೈಗಾರಿಕೆಗಳು, ಕೃಷಿ ಮತ್ತು ತ್ಯಾಜ್ಯಗಳೊಂಡಿರುವ ಮಲಿನಗೊಂಡಿರುವ ನೀರನ್ನು ಕುಡಿಯುತ್ತಿದ್ದೇವೆ. ಬಳ್ಳಾರಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ತುಂಗಭದ್ರಾ ಜಲಾಶಯ ಹೂಳಿನಿಂದ ತುಂಬಿದಲ್ಲಿ ಬಳ್ಳಾರಿಗೆ ನೀರಿಲ್ಲದೇ, ಜನರು ಊರು ಬಿಡುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಹೇಳಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles