ಬೆಳಗಾಯಿತು ವಾರ್ತೆ
ಬಳ್ಳಾರಿ: ಮಕ್ಕಳಲ್ಲಿ ಬುದ್ದಿ ಶಕ್ತಿಯನ್ನು ಹೆಚ್ಚಿಸಲು ಮತ್ತು ನೆನಪಿನ ಶಕ್ತಿಯನ್ನು ವೃದ್ದಿ ಮಾಡಲು ಬಳ್ಳಾರಿ ಚೆಸ್ ಸ್ಕೂಲ್, ಸನ್ ರೈಸ್ ಅಕಾಡೆಮಿ ಸ್ಕೂಲ್ ಮತ್ತು ವಿವಿಎಸ್ಎಸ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ೧೬ ವರ್ಷದ ಒಳಗಿನ ಮಕ್ಕಳಿಗೆ ಎರಡನೇ ಬಾರಿಗೆ ಬಳ್ಳಾರಿಯ ಪುಟ್ಬಾಲ್ ಮೈದಾನದಲ್ಲಿ ಡಿ.೩ರಂದು ಚೆಸ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ವಿವಿ ಎಸ್ ಎಸ್ ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶಲು ಅವರು ಹೇಳಿದರು.
ನಗರದ ವಿವಿಎಸ್ ಎಸ್ ಟ್ರಸ್ಟ್ ನ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಬಳ್ಳಾರಿಯ ಮಕ್ಕಳು ಚೆಸ್ ಆಡಬೇಕಾದರೆ ಬೇರೆ ಬೇರೆ ಜೀಲ್ಲೆಗಳಿಗೆ ಹೋಗಬೇಕಾಗುತ್ತದೆ. ಇದರಿಂದ ಮಕ್ಕಳಿಗೆ ಹೋಗಿ ಬರಲು ಕಷ್ಟ ಆಗುತ್ತದೆ. ಹಾಗಾಗಿ ಮಕ್ಕಳ ಹಿತದೃಷ್ಟಿಯಿಂದ ನಾವು ಬಳ್ಳಾರಿಯಲ್ಲಿಯೇ ಈ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಟೂರ್ನಮೆಂಟ್ ಗೆ ೫೦೦ ರೂ ಎಂಟ್ರಿ ಶುಲ್ಕವನ್ನು ನಿಗದಿ ಪಡಿಸಲಾಗಿದ್ದು, ಆಸಕ್ತರು ಡಿ.೨ರೊಳಗೆ ನೋಂದಾಯಿಸಲು ಕೋರಲಾಗಿದೆ.
ಈ ಟೂರ್ನಮೆಂಟ್ ನಲ್ಲಿ ನಿರ್ದೇಶಕರಾಗಿ ಅಪೂರ್ವ ಮತ್ತು ತೀರ್ಪುದಾರರಾಗಿ ಬಸವರಾಜ್ ಹಾಜರಾಗಲಿದ್ದಾರೆ ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9482996464 ಗೆ ಸಂಪರ್ಕಿಸಬಹುದು.