ಬೆಳಗಾಯಿತು ವಾರ್ತೆ
ಕೊಟ್ಟರು: ಕೊಟ್ಟರು ತಾಲೂಕಿನ ಸುತ್ತ ಮುತ್ತ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ ವಿದ್ಯಾರ್ಥಿಗಳಿಗಿ ಶಾಲೆ, ಕಾಲೇಜ್ ಬಿಟ್ಟ ಮೇಲೆ ತಮ್ಮ ಊರುಗಳಿಗೆ ತೆರಳು ಬಸ್ ಇಲ್ಲದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಜಾರಿ ಮಾಡಿದ ಶಕ್ತಿ ಯೋಜನೆ ಯೋಜನೆ ಮಹಿಳೆಯರಿಗೆ ಅನುಕೂಲ ವಾದರೆ, ಇತ್ತ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.