ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರ ಮನೆಯಲ್ಲಿ ಐಟಿ ರೇಡ್ ವೇಳೆಯಲ್ಲಿ 335ಕೋಟಿಗೂ ಹೆಚ್ಚಿನ ಹಣ ವಶಕ್ಕೆ ಪಡೆದಿದ್ದು ಅಕ್ರಮ ಹಣ ಸಂಗ್ರಹಿಸಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಮುಖಂಡರಾದ ಗುತ್ತಿಗೆ ನೂರು ವಿರುಪಾಕ್ಷ ಗೌಡ ಅವರು ಮಾತನಾಡಿ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರ ಮನೆಯಲ್ಲಿ ಐಟಿ ರೇಡ್ ವೇಳೆಯಲ್ಲಿ 250ಕೋಟಿಗೂ ಹಣ ದೊರೆತಿರುವುದು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ.ಇಂತಂಹ ಅಕ್ರಮ ಹಣವನ್ನು ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಈ ಪ್ರಕರಣ ಹೆಚ್ಚಿನ ತನಿಖೆಗಾಗಿ ಇಡಿಗೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರುಲಿಂಗನ ಗೌಡ, ಅನಿಲ್ ನಾಯ್ಡು, ಸುಗುಣಾ, ಹನುಮಂತ ಗುಡಿಗಂಟೆ, ಮೋಹನ್ ಸೇರಿದಂತೆ ಮತ್ತಿತರ ಇದ್ದರು.





