ಬೆಳಗಾಯಿತು ವಾರ್ತೆ
ಬಳ್ಳಾರಿ: ಹೊಸ ವರ್ಷದ ಹಾಗೂ ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಬಳ್ಳಾರಿಯಲ್ಲಿ ಜನವರಿ ೨ರಿಂದ ಜನವರಿ ೧೫ ರವರೆಗೆ ೧೪ ದಿಗಳ ಕಾಲ ರಾಜ್ಯ ಮಟ್ಟದ ವಿಶೇಷ ಕೈಮಗ್ಗ ಮೇಳ ವಸ್ತ್ರಸಿರಿ ೨೦೨೪ ಕೈ ಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ನಿರ್ದೇಶಕರಾದ ವೀರೇಶ್ ದವಳೇ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ರಾಯಲ್ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾಡಲಾಗಿದೆ. ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಬಳ್ಳಾರಿ ಇವರ ಆಶ್ರಯದಲ್ಲಿ ಜನವರಿ ೨ರಿಂದ ಜನವರಿ ೧೫ ರವರೆಗೆ ೧೪ ದಿಗಳ ಕಾಲ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ ೨ ೨೦೨೪ ರಂದು ಸಾಯಂಕಾಲ ಸಂಜೆ ನಾಲ್ಕು ಗಂಟೆಗೆ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ.ಎಂದರು.ಈ ಮೇಳದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯಗಳಿಂದ ನೇಕಾರ ಸಂಘಗಳು ಭಾಗವಹಿಸಲಿದ್ದು, ಉತ್ತಮ ವಿವಿಧ ನಮೂನೆಯ ಬಣ್ಣ ಬಣ್ಣದ ಹತ್ತಿ ಮತ್ತು ರೇಷ್ಮೆ ಸೀರೆ, ಟವೆಲ್, ಗುಡಾರ, ಲುಂಗಿ, ಬೆಡ್ ಸೀಟ್, ಬೆಡ್ ಸ್ಪ್ರೆಡ್ ಮೊಳಕಾಲ್ಮೂರು ಸೀರೆ, ಗದ್ವಾಲ್ ಸೀರೆ, ಗುಳೆದ್ ಗುಡ್ಡ ಸೀರೆ, ಕೈವಸ್ತ್ರ,, ಕಂಬಳಿ ಉಣ್ಣೆ ರಗ್ಗು, ಡೋರ್ ಮ್ಯಾಟ್, ಖಾದಿ ಬಟ್ಟೆಗಳು, ಸಂಡೂರಿನ ಲಮಾಣಿ ಕಸೂತಿ ಉತ್ತನ್ನಗಳು ಇತ್ಯಾದಿಗಳನ್ನು ಕೈಮಗ್ಗ ನೇಕಾರರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದರು.
ಈ ಸಂದರ್ಭದಲ್ಲಿಉಪ ನಿರ್ದೇಶಕರಾದ ವಿಠ್ಠಲ ರಾಜ್, ಸಹಾಯಕ ನಿರ್ದೇಶಕರಾದ ಮಹಾಂತೇಶ್ ಕಂಚಿನ ಮಠ ಸೇರಿದಂತೆ ಮತ್ತಿತರರು ಇದ್ದರು.