ಕುರುಗೋಡು: ಹಂದಿಹಾಳ್ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಗುರುವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯು. ಗಣೇಶ, ಉಪಾಧ್ಯಕ್ಷರಾಗಿ ವಸಂತಮ್ಮ. ಹೆಚ್ ಆಯ್ಕೆಯಾಗಿದ್ದಾರೆ’ ಎಂದು ಚುನಾವಣಾಧಿಕಾರಿ ಯೋಗೇಶ್ವರ ಅವರು ಘೋಷಿಸಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಪುರುಷ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮೀಸಲಿರಿಸಲಾಗಿತ್ತು. (13) ಜನ ಸದಸ್ಯರ ಪೈಕಿ ಎಲ್ಲಾ ಸದಸ್ಯರು ಹಾಜರಿದ್ದ ಸಭೆಯಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ಯು. ಗಣೇಶ (8) ಕೆ. ಶಾಂತಿ (5) ಮತ ಪಡೆದರು. ಹೆಚ್ಚು ಮತ ಪಡೆದ ಯು. ಗಣೇಶ ಅವರನ್ನು ಅಧ್ಯಕ್ಷರು ಎಂದು ಪ್ರಕಟಿಸಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ವಸಂತಮ್ಮ. ಹೆಚ್ (8), ಹುಲಿಗೆಮ್ಮ (5) ಮತ ಪಡೆದರು. ಹೆಚ್ಚು ಮತ ಪಡೆದ ವಸಂತಮ್ಮ. ಹೆಚ್ ಅವರನ್ನು ಉಪಾಧ್ಯಕ್ಷರು ಎಂದು ಪ್ರಕಟಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಡಿ.ಒ ಎಮ್. ಕೆ ಸಂಧ್ಯಾರಾಣಿ ಸಿಬ್ಬಂದಿಗಳು , ಮುಖಂಡರಾದ ಶ್ರೀನಿವಾಸ ರೆಡ್ಡಿ, ಗೆಜ್ಜೆಳ್ಳಿ ವೆಂಕಣ್ಣ, ಪರಶುರಾಮ, ಕೆ. ಶಿವಣ್ಣ, ಸನಲ್ ಸಾಬ್, ಹನ್ವರ್, ಪಿ. ಮೌಲಪ್ಪ, ಹರಿಜನ ಹೊನ್ನೂರಪ್ಪ, ಹೆಚ್. ಮಹೇಶ, ರಾಧಾಕೃಷ್ಣ, ಮಹೇಶ, ವಸಂತ, ಕುರುಬರ ಗೋಪಾಲ, ಗಾದಿಲಿಂಗ, ಗನ್ ಮಲ್ಲಿ, ಗುಡುದೂರು ಮತ್ತು ಹಂದಿಹಾಳ್ ಗ್ರಾಮದ ಮುಖಂಡರು ಇದ್ದರು.